73
ಮುನ್ನೆಚ್ಚರಿಕೆ: ಕೇರಳ ಕರ್ನಾಟಕ ಕರಾವಳಿ ತೀರದಲ್ಲಿ ಕಡಲುಬ್ಬರ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ
ಕಣಿಪುರ ಸುದ್ದಿಜಾಲ (ಅ.14)
ವಾತಾವರಣ ವೈಪರೀತ್ಯ ಮತ್ತು ವಾಯುಭಾರದ ಕುಸಿತದಿಂದ ಕೇರಳ-ಕರ್ನಾಟಕ ತೀರದಲ್ಲಿ ತೀವ್ರ ಮಳೆ ಸುರಿಯುವ ಸಂಭವಗಳಿದ್ದು, ಅ.15ರಂದು ಮುಂಜಾವ 5.30ರಿಂದ 16ರಂದು ರಾತ್ರಿ 11.30ರ ತನಕ ಕಡಲತೀರ ವಾಸಿಗಳು ಎಚ್ಚರ ವಹಿಸಬೇಕು ಮತ್ತು ಮೀನುಗಾರರು ಕಡಲಿಳಿಯಕೂಡದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂಜಾವ 5.30ರಿಂದ 16ರಂದು ರಾತ್ರಿಯ ತನಕ 1.0 ಮೊದಲ್ಗೊಂಡು 2.0 ಮೀಟರ್ ತನಕ ಸಮುದ್ರ ದಂಡೆಯ ತೆರೆಗಳು ಎತ್ತರಕ್ಕೇರಿ ಹೊಡೆಯಲಿವೆಯೆಂದೂ, ಕಡಲುಬ್ಬರ ತೀವ್ರವಾಗಿ ಕರಾವಳಿ ತೀರಕ್ಕೆ ಕಡಲಬ್ಬರಿಸಲಿವೆಯೆಂದೂ ಸಮುದ್ರ ವಾತಾವರಣ ಅಧ್ಯಯನ ಮಂಡಳಿ ನಿರ್ದೇಶನದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಕರಾವಳಿ ಸಹಿತ ತಮಿಳುನಾಡು, ಲಕ್ಷದ್ವೀಪ, ಮಾಹೆ ಕಡಲತೀರ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ.