ಕನ್ಯಾಡಿ ಯಕ್ಷ ಭಾರತಿ ಯ ಸೇವಾ ಕಾರ್ಯ ಮಾದರಿ, ಅಭಿನಂದನೀಯ: ಮೋಹನ್ ಕುಮಾರ್. ಕೆ

by Narayan Chambaltimar

(kanyadi) ಕನ್ಯಾಡಿ: (ಅ.13)

ಯಕ್ಷ ಭಾರತಿ ರಿ. ಕನ್ಯಾಡಿ ಇದರ ದಶಮಾನೋತ್ಸವದ ಪ್ರಯುಕ್ತ ತುಳು ಶಿವಳ್ಳಿ ಸಭಾ.ರಿ ಬೆಳ್ತಂಗಡಿ ಆಶ್ರಯದಲ್ಲಿ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಯೆನಾಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಜುಲೈಕಾ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವು ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ಜರಗಿತು.

“ಬದುಕು ಕಟ್ಟೋಣ ಬನ್ನಿ” ತಂಡ ಉಜಿರೆ ಸಂಚಾಲಕ ಮೋಹನ್ ಕುಮಾರ್. ಕೆ ಶಿಬಿರ ಉದ್ಘಾಟಿಸಿ “ಯಕ್ಷಗಾನ, ಸಂಸ್ಕಾರ ಶಿಕ್ಷಣ ಜೊತೆಗೆ ಆರೋಗ್ಯ ಸೇವೆಯ ಸಾಮಾಜಿಕ ಕಳಕಳಿಯನ್ನು ಯಕ್ಷ ಭಾರತಿ ಸಂಸ್ಥೆಯು ಹೊಂದಿರುವುದು ಅಭಿನಂದನೀಯ ಮತ್ತು ಮಾದರಿ ಎಂದು ಪ್ರಶಂಸಿಸಿದರು.

ಡಾ.ಅಶ್ವಿನಿ ಶೆಟ್ಟಿ ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ,ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಡಾ. ಮುರಳಿ ಕೃಷ್ಣ ಇರ್ವತ್ರಾಯ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲಾ,ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ದೇವದಾಸ ಶೆಟ್ಟಿ , ಉಜಿರೆ ಶ್ರೀ ಧ. ಮ. ಕಾಲೇಜು ರಾ. ಸೆ. ಯೋ. ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ, ಉಜಿರೆ ಜನಾರ್ದನ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಗಂಗಾಧರ್ ರಾವ್ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶ್ರೀನಿವಾಸರಾವ್ ಕಲ್ಮಂಜ ಪ್ರಾರ್ಥಿಸಿದರು
ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಸ್ವಾಗತಿಸಿ ಸಹ ಕಾರ್ಯದರ್ಶಿ ಗೀತಾ ಕುರ್ಮಾಣಿ ವಂದಿಸಿದರು. ಮುರಳಿ ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಯಕ್ಷ ಭಾರತಿ ಪದಾಧಿಕಾರಿಗಳಾದ ಹರೀಶ್ ರಾವ್. ಯಂ,ಹರಿದಾಸ ಗಾಂಭೀರ ಧರ್ಮಸ್ಥಳ, ಮಹೇಶ ಕನ್ಯಾಡಿ, ಕುಸುಮಕರ ಕುತ್ತೋಡಿ, ಶಿತಿಕಂಠ ಭಟ್, ಭವ್ಯ ಹೊಳ್ಳ,ಸೂರ್ಯನಂದ ರಾವ್,ಸುದರ್ಶನ್ ಕೆ. ವಿ, ಮುರಳಿಧರ ದಾಸ್,ಡಿ.ಕೃಷ್ಣ ಕನ್ಯಾಡಿ,ಕೌಸ್ತುಭ,ಕೌಶಿಕ ರಾವ್ ಕನ್ಯಾಡಿ, ಯಶೋಧರ ಇಂದ್ರ, ಶಶಿಧರ ಕನ್ಯಾಡಿ ಉಪಸ್ಥಿತರಿದ್ದು ಶಿಬಿರದ ಸಂಯೋಜನೆಗೆ ಸಹಕರಿಸಿದರು.

11 ಆರೋಗ್ಯ ಸೇವಾ ವಿಭಾಗಗಳಲ್ಲಿ ತಜ್ಞ ವೈದ್ಯರು ಉಪಸ್ಥಿತರಿದ್ದು 150ಕ್ಕಿಂತಲೂ ಹೆಚ್ಚು ಫಲಾನುಭವಿಗಳು ಶಿಬಿರದಲ್ಲಿ ತಪಾಸಣೆಗೊಳಪಟ್ಟು ಚಿಕಿತ್ಸೆಯ ಮಾಹಿತಿ ಪಡೆದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00