Kanipura news network
ಸರಕಾರಿ ಉದ್ಯೋಗದ ಭರವಸೆಯೊಡ್ಡಿ ಹಲವರಿಂದ ಹಣಪಡೆದು ವಂಚಿಸಿದ ಡಿವೈಎಫ್ಐ, ಸಿಪಿಎಂ ನಾಯಕಿ ಪುತ್ತಿಗೆ ಬಾಡೂರು ಶಾಲಾಧ್ಯಾಪಕಿ ಸಚಿತಾ ರೈ ವಿರುದ್ಧ ಮತ್ತಷ್ಟು ಕೇಸುಗಳು ದಾಖಲಾಗುತ್ತಿವೆ.
ಪೈವಳಿಕೆ ಕಾಡೂರಿನ ಮೋಕ್ಷಿತಾ ಶೆಟ್ಟಿ ಎಂಬವರಿಗೆ ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷರೂ ಪಡೆದು ವಂಚಿಸಿರುವುದಾಗಿ ಮಂಜೇಶ್ವರ ಪೋಲೀಸರಿಗೆ ನೀಡಿದ ದೂರಿನಂತೆ ಕೇಸುದಾಖಲಾಗಿದೆ. ಇದರೊಂದಿಗೆ ಸಚಿತಾ ರೈ ವಿರುದ್ದ ಬದಿಯಡ್ಕ, ಕುಂಬಳೆ, ಮಂಜೇಶ್ವರ ಪೋಲೀಸ್ ಠಾಣೆಗಳಲ್ಲಿ ಒಟ್ಟು 5ಕೇಸು ದಾಖಲಾಗಿವೆ.
ಈ ತನ್ಮದ್ಯೆ ಕಿದೂರು ನಿವಾಸಿ ಅಶ್ವಿನ್ ಎಂಬವರ ಪತ್ನಿ ಕೆ.ರಕ್ಷಿತಾ ರಿಂದ ಎಸ್.ಬಿ.ಐ ಬೇಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 13ಲಕ್ಷ ರೂ ಪಡೆದು ಮೋಸಮಾಡಲಾಗಿದೆಯೆಂಬ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲೂ ಕೇಸು ದಾಖಲಾಗಿದೆ.
ವಂಚನೆ ಪ್ರಕರಣದಲ್ಲಿ ಆರೋಪವನ್ನೆದುರಿಸುವ ಸಚಿತಾ ರೈ ತನ್ನ ಬಂಧನದ ವಿರುದ್ಧ ಕಾಸರಗೋಡು ಸೆಷನ್ಸ್ ನ್ಯಾಯಾಲಯದಿಂದ ತಾತ್ಕಾಲಿಕ, ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರಾದರೂ, ಕರ್ನಾಟಕ ಪೋಲೀಸರು ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.