33
ಬೆಳ್ತಂಗಡಿ ತಾಲೂಕಿನ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯಕ್ಷರಾಧನ ಪ್ರತಿಷ್ಠಾನನ ನಾಳ ಸಂಯೋಜನೆಯಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 51ನೇ ಕಾರ್ಯಕ್ರಮವಾಗಿ
ಶಲ್ಯ ಸಾರಥ್ಯ ತಾಳಮದ್ದಳೆ ಜರಗಿತು.
ಭಾಗವತರಾಗಿ ಜಗದೀಶ ಚಾರ್ಮಾಡಿ ಶ್ರೀ ಧರ್ಮಸ್ಥಳ ಮೇಳ, ಹಿಮ್ಮೇಳದಲ್ಲಿ ಮೋನಪ್ಪ ಗೌಡ ಕೊಲ್ಲಮೋಗ್ರು ಕಟೀಲು ಮೇಳ, ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ
ಅರ್ಥಧಾರಿಗಳಾಗಿ ದಿವಾಕರಆಚಾರ್ಯ ಗೇರುಕಟ್ಟೆ(ಶಲ್ಯ) ರಾಘವ. ಎಚ್ ಗೇರುಕಟ್ಟೆ(ಕೌರವ) ಶಿವಾನಂದ ಭಂಡಾರಿ ಪಣೆಜಾಲು(ಕರ್ಣ )ಭಾಗವಹಿಸಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಘವ ಗೇರುಕಟ್ಟೆ ಸ್ವಾಗತಿಸಿ ದೇವಳದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ ಪೆರ್ಮುಡ ವಂದಿಸಿದರು.