ಕಲಾಪೋಷಕ ವಾಸುದೇವ ಐತಾಳರ ಷಷ್ಠ್ಯಬ್ದ ಕೊಡುಗೆ: ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಮನೆ ಹಸ್ತಾಂತರ

by Narayan Chambaltimar

 

ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಪ್ರಥಮ ಪಿ.ಯು.ಸಿ.ಯ ಶ್ರೀನಿಧಿ ಹಾಗೂ ಪ್ರಥಮ ಬಿ.ಇ.ಯ ಭೂಮಿಕಾ ಸಹೋದರಿಯರಿಗೆ ಬ್ರಹ್ಮಾವರ ತಾಲೂಕಿನ ಹೇರಾಡಿಯ ಸಂಕಾಡಿಯಲ್ಲಿ ಕಲಾಪೋಷಕ ಪಣಂಬೂರು ವಾಸುದೇವ ಐತಾಳ್ ಇವರು ತಮ್ಮ 60ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಪ್ರಾಯೋಜಿಸಿದ ನೂತನ ಮನೆ ‘ಕೃಪಾರಂಗ’ ವನ್ನು ನಿನ್ನೆ (ಅ.12) ಹಸ್ತಾಂತರಿಸಲಾಯಿತು.

ಪಣಂಬೂರು ವಾಸುದೇವ ಐತಾಳ್, ಶ್ರೀಮತಿ ಮೀನಾಕ್ಷಿ ವಿ.ಐತಾಳ ದಂಪತಿಗಳು ಜ್ಯೋತಿ ಬೆಳಗಿಸಿ ನೂತನ ಗೃಹ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರ ಸಹೋದರಿ ಜಯಶ್ರೀ ಉಪಸ್ಥಿತರಿದ್ದರು. ಕಲಾರಂಗ ವಿಶ್ವಾಸಾರ್ಹತೆ ಮತ್ತು ಸಮಾಜಪ್ರೀತಿಯಿಂದ ಕೆಲಸ ಮಾಡುವ ಅನನ್ಯ ಸಂಘಟನೆ ಸಹಾಯ ಪಡೆದ ವಿದ್ಯಾರ್ಥಿಗಳು ಪ್ರತ್ಯರ್ಪಣದಿಂದ ಸಮಾಜದ ಋಣ ತೀರಿಸಬೇಕು ಎಂದು ಐತಾಳರು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಯಕ್ಷಗಾನ ಕಲಾರಂಗದ ಕಾರ್ಯಕರ್ತರ ನಿಸ್ಪೃಹ ಸಮಾಜಪರ ಕೆಲಸ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ,ನಿವೃತ್ತ ಪ್ರಾಂಶುಪಾಲೆ ತಾರಾ ಮೇಡಮ್, ಉಪನ್ಯಾಸಕಿ ಅನುರಾಧ, ನಿವೃತ್ತ ಬ್ಯಾಂಕ್ ಉದ್ಯೋಗಿಗಳಾದ ನರಸಿಂಹ ಮೂರ್ತಿ ಭಾಗವಹಿಸಿದ್ದರು.ಸಂಸ್ಥೆಯ ಕಾರ್ಯಕರ್ತರಾದ ಬಿ.ಭುವನಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಅನಂತರಾಜ್ ಉಪಾಧ್ಯಾಯ, ಎ. ಅಜಿತ್ ಕುಮಾರ್, ಡಾ.ಪೃಥ್ವಿರಾಜ್, ಡಾ. ರಾಜೇಶ ನಾವಡ,ಗಣಪತಿ ಭಟ್, ವಿನೋದಾ ಎಂ.ಕಡೆಕಾರ್, ವಿಶ್ವನಾಥ ಪ್ರಾಕ್ತನ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಸುಶ್ಮಾ,ಕಲ್ಪಶ್ರೀ, ಚೆನ್ನಬಸವ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು.ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು. ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಭಗ್ನಗೊಂಡ ಮನೆಯನ್ನು 6 ಲಕ್ಷ ವೆಚ್ಚದಲ್ಲಿ,ಕೇವಲ 80 ದಿನಗಳಲ್ಲಿ ನಿರ್ಮಿಸಿ ಹಸ್ತಾಂತರಿಸಿರುವುದು ಸಂಸ್ಥೆಯ ಮನೆ ನಿರ್ಮಾಣದ ಚರಿತ್ರೆಯಲ್ಲಿ ಹೊಸ ದಾಖಲೆಯಾಗಿದೆ. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 55 ನೆಯ ಮನೆಯಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00