ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ ನಿಮಿತ್ತ ಶ್ರೀ ಮಹಾಭಾರತ ಸರಣಿಯಲ್ಲಿ 100 ತಾಳಮದ್ದಳೆಗಳನ್ನು ನಡೆಸಲು ಉದ್ದೇಶಿಸಿದ್ದು
ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಶ್ರೀ ಮಹಾಭಾರತ ಸರಣಿಯಲ್ಲಿ ಅಭಿಮನ್ಯು ಕಾಳಗ ತಾಳಮದ್ದಳೆ ಪ್ರಸ್ತುತಪಡಿಸಿ 50 ತಾಳಮದ್ದಳೆಗಳನ್ನು ಯಶಸ್ವಿಯಾಗಿ ಪೂರೈಸಿತು.
ಶ್ರೀ ಶಾರದೋತ್ಸವ ಸಮಿತಿಯ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ,ಡಿ.ಕೆ ಆಚಾರ್ಯ ಅಲಂಕಾರು,ಸುರೇಶ್ ರಾವ್ ಬನ್ನೆಂಗಳ,ಶ್ರೀಪತಿಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ
ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಸತೀಶ್ ಆಚಾರ್ಯ ಮಾಣಿ,ಗುಡ್ಡಪ್ಪ ಗೌಡ ಬಲ್ಯ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಜಯರಾಮಗೌಡ ಬಲ್ಯ, ಜಿನೇಂದ್ರ ಜೈನ್ ಬಳ್ಳಮಂಜ, ಹರೀಶ್ ಆಚಾರ್ಯ ಬಾರ್ಯ, ದಿವಾಕರ ಆಚಾರ್ಯ ನೇರೆಂಕಿ, ಸಂಜೀವ ಪಾರೆಂಕಿ,ಹರಿಕಿರಣ್ ಕೊಯ್ಲ ಭಾಗವಹಿಸಿದ್ದರು.
ರಾಮನಗರದ ಸೌಹಾರ್ದ ಯಕ್ಷಗಾನ ಸಮಿತಿ ವತಿಯಿಂದ ಕಲಾವಿದ ಗುಡ್ಡಪ್ಪ ಬಲ್ಯರನ್ನು ಸನ್ಮಾನಿಸಲಾಯಿತು.ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ.ಎನ್ ಕಾರ್ಯಾಧ್ಯಕ್ಷ ರಾಮಚಂದ್ರ ಮಣಿಯಾಣಿ,ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಖಜಾಂಜಿ ವಿಶ್ವನಾಥ ಶೆಟ್ಟಿ ಕಂಗ್ವೆ ತಾಳಮದ್ದಳೆಯ ಕಲಾವಿದರನ್ನು ಗೌರವಿಸಿದರು. ಈ ಮೂಲಕ 50ನೇ ಕಾರ್ಯಕ್ರಮವು ವಿಶಿಷ್ಟವಾಗಿ ಜರಗಿತು.
ತಾಳಮದ್ದಳೆಯಲ್ಲಿ ಅಪೂರ್ವವಾಗಿ ನಡೆಯುವ ಈ ಪ್ರಸಂಗವನ್ನು ಸಂಯೋಜನೆ ಮಾಡಿದ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಇವರನ್ನು ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ಸ್ವಾಗತಿಸಿ ಸಮಿತಿಯ ಪದಾಧಿಕಾರಿ ಜಯಂತ ಪುರೋಳಿ ವಂದಿಸಿದರು.