ಠಾಣೆಯಿಂದ ಆಟೋ ಮರಳಿಸಿಗದಕ್ಕೆಆತ್ಮಹತ್ಯೆಗೈದ ರಿಕ್ಷಾ ಚಾಲಕ: ಪೋಲೀಸ್ ವಿರುದ್ಧ ಕೇಸು ದಾಖಲಿಸಿದ ಮಾನವ ಹಕ್ಕು ಆಯೋಗ

by Narayan Chambaltimar

ಕಣಿಪುರ ಸುದ್ದಿಜಾಲ( ಅ.10)
ಕಾಸರಗೋಡು: ಪೋಲೀಸ್ ಕಿರುಕುಳದಿಂದ ಬೇಸತ್ತು, ಸಾಮಾಜಿಕ ಜಾಲತಾಣದಲ್ಲಿ ತನ್ನ ಬವಣೆ ತೋಡಿಕೊಂಡು ಆತ್ಮಹತ್ಯೆಗೆ ಶರಣಾದ ಆಟೋ ರಿಕ್ಷಾಚಾಲಕನ ಸಾವಿನ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಪ್ರೇರಣೆಯಿಂದ ಕಾಸರಗೋಡು ಪೋಲೀಸ್ ವಿರುದ್ಧ ಕೇಸು ದಾಖಲಿಸಿ ತನಿಖೆಗೆ ಆದೇಶಿಸಿದೆ.

ಸಾರಿಗೆ ಸಂಚಾರ ಕಾನೂನು ಉಲ್ಲಂಘಿಸಿ ಟ್ರಾಫಿಕ್ ತೊಂದರೆ ಉಂಟುಮಾಡಿದರೆಂದು ಆರೋಪಿಸಿ ಪೋಲೀಸ್ ವಶಪಡಿಸಿದ್ದ ಆಟೋ ರಿಕ್ಷಾ ಮರಳಿ ನೀಡಿಲ್ಲವೆಂದು ಮನನೊಂದು ಆಟೋಚಾಲಕ ಅಬ್ದುಲ್ ಸತ್ತಾರ್ (60) ಅವರು ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದಿದ್ದರು. ಸಾಲದಲ್ಲಿ ಖರೀದಿಸಿದ ಆಟೋ ಬಾಡಿಗೆ ನಡೆಸಿ, ರೈಲ್ವೇ ನಿಲ್ದಾಣ ಪರಿಸರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಚಾಲಕನು ಪೋಲೀಸ್ ವಶಪಡಿಸಿ ಕೊಂಡೊಯ್ದು ಠಾಣೆಯಲ್ಲಿಟ್ಟ ರಿಕ್ಷಾ ಮರಳಿ ಒದಗಿಸುವಂತೆ ಪರಪರಿಯಾಗಿ ಬೇಡಿಕೊಂಡರೂ ಠಾಣಾಧಿಕಾರಿ ಸತಾಯಿಸಿದ್ದರೆಂದೂ, ಈ ಕಾರಣದಿಂದ ತಾನು ಆತ್ಮಹತ್ಯೆಗೈಯ್ಯುವುದಾಗಿ ಮರಣಕ್ಕೆ ಮುನ್ನ ಚಾಲಕ ಫೇ.ಬು.ಪೋಸ್ಟ್ ಹಾಕಿದ್ದರು. ಈ ಕುರಿತಾದ ಮಾಧ್ಯಮ ವರದಿ ಪರಿಶೀಲಿಸಿ ಸ್ಶಯಂ ಕೇಸು ದಾಖಲಿಸಿದ ಮಾನವ ಹಕ್ಕು ಆಯೋಗ ಈ ಸಂಬಂಧ ಒಂದು ವಾರದೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪೋಲೀಸ್ ವರಿಷ್ಠರಿಗೆ ಆದೇಶಿಸಿದೆ.

ಮಾಧ್ಯಮ ಸುದ್ದಿಗಳ ಆಧಾರದಲ್ಲಿ ಮಾನವ ಹಕ್ಕು ಆಯೋಗ ಕೇಸುದಾಖಲಿಸಿದ್ದು, ಮುಂದಿನ ತಿಂಗಳು ಕಾಸರಗೋಡು ನಡೆಯುವ ಅದಾಲತ್ ನಲ್ಲಿ ಪ್ರಕರಣ ಪರಿಶೀಲಿಸುವುದೆಂದು ತಿಳಿಸಿದೆ.

ಇದೇ ವೇಳೆ ಈ ಪ್ರಕರಣದ ಕುರಿತು ಕ್ರೈಂಬ್ರಾಂಚ್ ತನಿಖೆಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪ ಆದೇಶಿಸಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಪಿ.ಅನೂಬ್ ರನ್ನು ಚಂದೇರ ಠಾಣೆಗೆ ವರ್ಗಾಯಿಸಲಾಗಿದೆ. ರಿಕ್ಷಾ ವಶಪಡಿಸುವ ವೇಳೆ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಕೃಷ್ಣನ್ ಅವರನ್ನು ಕುಂಬಳೆ ಠಾಣೆಗೆ ವರ್ಗಾಯಿಸಲಾಗಿದೆ.
ರಿಕ್ಷಾ ಚಾಲಕನ ಆತ್ಮಹತ್ಯೆಗೆ ಕಾಸರಗೋಡು ನಗರ ಠಾಣೆಯ ಎಸ್.ಐಯ ಮೊಂಡು ಹಠವೇ ಕಾರಣವಾಗಿದ್ದು ಅವರ ಮೇಲೆ ಆತ್ಮಹತ್ಯಾ, ಪ್ರೇರಣೆಯ ಕೇಸು ದಾಖಲಿಸಬೇಕೆಂದು ರಿಕ್ಷಾ ಚಾಲಕರು ಒತ್ತಾಯಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00