ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವ ಪ್ರಯುಕ್ತ ಅ.9ರಂದು ಬೆಳಿಗ್ಗೆ 7.30 ಕ್ಕೆ ಶ್ರೀ ಶಾರದ ಪ್ರತಿಷ್ಠೆ ಮತ್ತು ವಿದ್ಯಾರ್ಥಿಗಳ ಜ್ಞಾನ ಶಕ್ತಿ ಹೆಚ್ಚಿಸುವ ಸಲುವಾಗಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವೇದ ಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ “ಸರಸ್ವತೀ ಹವನ” ನಡೆಯಿತು.
ಈ ಸಂದರ್ಭದಲ್ಲಿ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.
ದಿ.11 ರಂದು ದುರ್ಗಾಷ್ಟಮಿ ಸಲುವಾಗಿ ವಿದುಷಿ ಉಷಾ ಈಶ್ವರ್ ಭಟ್ ಕಾಸರಗೋಡು ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ದಿ.12ರಂದು ವಿಜಯದಶಮಿಯ ಶುಭದಿನದಂದು ಬೆ.7.30 ಕ್ಕೆ ವಿದ್ಯಾರಂಭ, ಬೆ.8.00 ಕ್ಕೆ ವಾಹನಪೂಜೆ ಬಳಿಕ ಕು.ಗಾಯತ್ರಿ ಮತ್ತು ಕು. ಶ್ರಾವಣ್ಯ ಕೊಂಡೆವೂರು ಇವರ “ಶಾಸ್ತ್ತೀಯ ಸಂಗೀತ ಕಾರ್ಯಕ್ರಮ”, ಮಧ್ಯಾಹ್ನ ಪೂಜೆಯ ನಂತರ ಶ್ರೀ ಮಠದ ನಕ್ಷತ್ರವನದಲ್ಲಿರುವ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀ ಶಾರದಾ ವಿಸರ್ಜನೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.