51
ಕಣಿಪುರ ಸುದ್ದಿಜಾಲ(ಅ.7)
ಮಂಜೇಶ್ವರ: ಮಂಜೇಶ್ವರದಲ್ಲಿ ಸ್ಕೂಟರ್ ಮಗುಚಿಬಿದ್ದು ಚಾಲಕ ಗಾಯಗೊಂಡು, ಹಿಂಬದಿ ಸವಾರ ಮೃತಪಟ್ಟ ಘಟನೆ ನಡೆದಿದೆ. ನಿನ್ನೆ ರಾತ್ರಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪರಿಸರದಲ್ಲಿ ಘಟನೆ ನಡೆಯಿತು.
ಅಪಘಾತದಲ್ಲಿ ಮೃತರಾದವರು ಉದ್ಯಾವರ ಗುತ್ತು ಅಂಬೇಡ್ಕರ್ ನಗರದ ದಿ. ಸೋಮಯ್ಯರ ಪುತ್ರ ರಾಜೇಶ(40) ಎಂದು ಗುರುತಿಸಲಾಗಿದೆ. ಸ್ಕೂಟರ್ ಚಾಲಕ ಪಾವೂರು ನಿವಾಸಿ ಉದಯ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ರಾತ್ರಿ ಜತೆಯಾಗಿ ಮನೆಗೆ ತೆರಳುವ ದಾರಿಮಧ್ಯೆ ಸ್ಕೂಟರ್ ಸ್ಕಿಡ್ ಆಗಿ ಮಗುಚಿ ಬಿದ್ದು ದುರ್ಘಟನೆ ಸಂಭವಿಸಿತು. ಮೃತ ರಾಜೇಶ್ ಪತ್ನಿ ಜಯಶ್ರೀ ಹಾಗೂ ಇಬ್ಬರು ಮಕ್ಕಳನ್ನಗಲಿದ್ದಾರೆ. ಮಂಜೇಶ್ವರ ಪೋಲೀಸರು ಅಫಘಾತದ ಕೇಸು ದಾಖಲಿಸಿದ್ದಾರೆ.