ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಸಹಯೋಗದಲ್ಲಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 49ನೇ ಕಾರ್ಯಕ್ರಮವಾಗಿ
ಭೀಮ -ದ್ರೌಪದಿ ಸಮರ ಸನ್ನಾಹ
ತಾಳಮದ್ದಳೆ ಜರಗಿತು.
ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಹರೀಶ ಆಚಾರ್ಯ ಉಪ್ಪಿನಂಗಡಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ಉಪ್ಪಿನಂಗಡಿ , ಜಗದೀಶ ಚಾರ್ಮಾಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ
ಮಧೂರು ಮೋಹನ ಕಲ್ಲೂರಾಯ(ದ್ರೌಪದಿ )ದಿವಾಕರ ಆಚಾರ್ಯ ಗೇರುಕಟ್ಟೆ , ಹರೀಶ ಆಚಾರ್ಯ ಬಾರ್ಯ(ಶ್ರೀ ಕೃಷ್ಣ )ಜಯರಾಮ ಬಲ್ಯ(ಭೀಮ )ಸಂಜೀವಪಾರೆಂಕಿ(ಧರ್ಮರಾಯ) ಶ್ರೀಮತಿ ಶ್ರುತಿ ವಿಸ್ಮಿತ್ ಬಲ್ನಾಡು(ಸಹದೇವ, ಅರ್ಜುನ )
ಭಾಗವಹಿಸಿದ್ದರು.ಕಳಿಯ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಪ್ರಧಾನ ಅರ್ಚಕ ರಾಘವೇಂದ್ರ ಅಸ್ರನ್ನ,, ಕಚೇರಿ ವ್ಯವಸ್ಥಾಪಕ ಗಿರೀಶ್ ಶೆಟ್ಟಿ, ವಿಠ್ಠಲಶೆಟ್ಟಿ ಉಪ್ಪಡ್ಕ ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ. ಎಚ್ ಗೇರುಕಟ್ಟೆ ಸ್ವಾಗತಿಸಿ ದೇವಳ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆರ್ಮುಡ ವಂದಿಸಿದರು.
ಸರಣಿಯ 50ನೇ ಕಾರ್ಯಕ್ರಮ ಅ.10ರಂದು ಉಪ್ಪಿನಂಗಡಿ ರಾಮನಗರ ಶ್ರೀ ಶಾರದಾ ಕಲಾಮಂದಿರದಲ್ಲಿ ಜರಗಲಿದೆ. ಮಧ್ಯಾಹ್ನ 1.30ರಿಂದ ನಡೆಯುವ ಕಾರ್ಯಕ್ರಮದಲ್ಲಿ “ಭಾರತರತ್ನ” ತಾಳಮದ್ದಳೆ ಜರಗಲಿದ್ದು, ಈ ವೇಳೆ ಕಲಾವಿದ ಗುಡ್ಡಪ್ಪ ಬಲ್ಯರನ್ನು ಗೌರವಿಸಲಾಗುವುದು.