ಗಾಯಕಿಯ ಅತ್ಯಾಚಾರ, ಬೆದರಿಕೆ: ಮಾಪಿಳಪ್ಪಾಟ್ ಗಾಯಕನ ಬಂಧನ

by Narayan Chambaltimar

ಕಣಿಪುರ ಸುದ್ದಿಜಾಲ( ಅ.5)

ಕಾಸರಗೋಡು: ಮದುವೆ ಮನೆಗಳಲ್ಲಿನಡೆಯುವ ಆರ್ಕೆಸ್ಟ್ರಾಗಳಲ್ಲಿ ಹಾಡಲೆಂದು ಕರೆದೊಯ್ಯತ್ತಿದ್ದ ಗಾಯಕಿಯೊಬ್ಬರನ್ನು ಅತ್ಯಾಚಾರಗೈದು ಬಳಿಕ ಬೆದರಿಸಿ, ಹಣ ಕಬಳಿಸಲೆತ್ನಿಸಿದ ಮಾಪಿಳಪ್ಪಾಟ್ ಗಾಯಕನನ್ನು ಬಂಧಿಸಲಾಗಿದೆ.
ಕಾಹರಗೋಡಿನ ಆಲಂಪಾಡಿ ನಿವಾಸಿ ” ಪಟ್ಟುರುಮಾಲ್” ರಿಯಾಜ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ

ಗೃಹಿಣಿಯಾದ ಗಾಯಕಿ ನೀಡಿದ ದೂರಿನಂತೆ ಚಿತ್ತಾರಿಕಲ್ ಪೋಲಿಸ್ ಠಾಣಾಧಿಕಾರಿ ಆರೋಪಿಯನ್ನು ಬಂಧಿಸಿ, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ದೂರುದಾತೆಯಾದ 26ರ ಮಹಿಳೆ ಈತನೊಂದಿಗೆ ಆರ್ಕೆಸ್ಟ್ರಾದಲ್ಲಿ ಹಾಡಲು ಹೋಗುತ್ತಿದ್ದರು. ಹೆಚ್ಚಾಗಿ ಮದುವೆ ಮನೆಗಳಲ್ಲೇ ಕಾರ್ಯಕ್ರಮಗಳು ಸಿಗುತ್ತಿದ್ದುವು. ಈ ನಡುವೆ ಒಂದು ದಿನ ಗಾಯಕಿಯನ್ನು ಕರೆದೊಯ್ದು ಅತ್ಯಾಚಾರ ಗೈದನಲ್ಲದೇ, ಆ ಬಳಿಕ ಈ ಕುರಿತು ಪ್ರಚಾರಮಾಡುವುದಾಗಿ ಬೆದರಿಸಿ ಹಣಕೀಳಲಾರಂಭಿಸಿದನೆಂದು ದೂರಿನಲ್ಲಿ ತಿಳಿಸಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00