ಕಣಿಪುರ ಸುದ್ದಿಜಾಲ (ಅ.4)
ರಾಯ್ಪುರ: ಮಾವೋವಾದಿ ನಕ್ಸಲೀಯರ ಅಟ್ಟಹಾಸ ಮೆರೆಯುತ್ತಿದ್ದ ಛತ್ತೀಸ್ಗಢದ ನಾರಾಯಣ್ಪುರ- ರಾಂತೋಡ್ ಗಡಿಯಲ್ಲಿ ಪೋಲೀಸ್ ದಳ ಮತ್ತು ನಕ್ಸಲೀಯರ ನಡುವೆ ಸಂಘರ್ಷ ನಡೆದಿದ್ದು , ಕನಿಷ್ಠ 36 ನಕ್ಸಲೀಯರು ಎನ್ಕೌಂಟರಿನಲ್ಲಿ ಮೃತರಾದರೆಂದು ಸುದ್ದಿ ಏಜೆನ್ಸಿಗಳು ಪ್ರಕಟಿಸಿವೆ.
ಪೌಲೀಸರು ಮತ್ತು ನಕ್ಸಲೀಯರ ನಡುವೆ ಸಂಘರ್ಷ ಏರ್ಪಟ್ಟು ಇಷ್ಟು ಪ್ರಮಾಣದ ಮಾವೋವಾದಿಗಳು ಸದ್ಯ ಹತರೋಗಿರುವುದೇ ಅಪರೂಪ.
ಮಾವೋವಾದಿ ಮುಖಂಡನ ಸಹಿತ 36 ಮೃತದೇಹಗಳು ಸಿಕ್ಕಿವೆಯಾದರೂ ಅವುಗಳ ಗುರುತು ಪತ್ತೆ ಹಚ್ಚಿ ಪ್ರಕಟಿಸಲಾಗಿಲ್ಲ. ಶುಕ್ರವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆದಿದೆ.
ಛತ್ತೀಸ್ಘಢದ ಗಡಿಪ್ರದೇಶದ ಕಾಡಲ್ಲಿ ಕಳೆದ ಕೆಲವರ್ಷಗಳಿಂದ ನೆಲೆಕಂಡಿರುವ ಮಾವೋವಾದಿಗಳು ಇತ್ತೀಚಿನ ದಶಕದಲ್ಲಿ ಪೋಲೀಸರೊಂದಿಗೆ ಸಂಘರ್ಷದಲ್ಲೇರ್ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಘಟಿತ ಪ್ರತ್ಯೇಕ ಪೋಲೀಸ್ ದಳ ನಕ್ಸಲೀಯ ಭೇಟೆಗೆಂದೇ ಇಂದು ಕಾಡಿಗೆ ನುಗ್ಗಿದ್ದರು. ಈ ವೇಳೆ ಮಾವೋವಾದಿಗಳ ಜತೆಗೆ ಪ್ರತ್ಯಕ್ಷ ಸಮರ ನಡೆದಿದ್ದು, ಹತರಾದವರಿಂದ ಎಕೆ 47 ಸಹಿತ ಮಾರಕಾಯುಧ ವಶ ಪಡಿಸಲಾಗಿದೆ.
ಸಂಘರ್ಷದಲ್ಲಿ ಪೋಲೀಸ್ ದಳದ ಕೆಲವರೂ ಗಾಯಗೊಂಡಿದ್ದಾರೆ. ಈ ಕುರಿತಾದ ಹೆಚ್ಚಿನ ಮಾಹಿತಿ ನ್ಯೂಸ್ ಏಜೆನ್ಸಿ ಪ್ರಕಟಿಸಿಲ್ಲ.