ಸೂರ್ಯೋದಯ, ಸೂರ್ಯಾಸ್ತಮಯ ಸವಿಯಲು ಅವಕಾಶ: ಬೇಕಲ ಕೋಟೆಯ ಸಂದರ್ಶಕ ಸಮಯ ವಿಸ್ತರಣೆ

by Narayan Chambaltimar

ಕಣಿಪುರ ಸುದ್ದಿಜಾಲ
ಕಾಸರಗೋಡು(ಸೆ.2)

ಕಡಲತೆರೆಗಳು ಮುತ್ತಿಡುತ್ತಲೇ ಇರುವ ಕಾಸರಗೋಡಿನ ಸೌಂದರ್ಯದ ಸಂಕೇತವಾದ ಬೇಕಲ ಕೋಟೆಯಲ್ಲೀಗ ಪ್ರವಾಸಿ ಸಂದರ್ಶಕ ಸಮಯ ವಿಸ್ತರಿಸಲಾಗಿದೆ. ಇನ್ನು ಕಾಸರಗೋಡಿಗೆ ಬಂದ ಯಾವನೇ ಆಸಕ್ತರಿಗೆ ಮುಂಜಾನೆ ಅಥವಾ ಮುಸ್ಸಂಜೆ ಬೇಕಲ ಕೋಟೆಯೊಳಗೆ ಸೂರ್ಯೋದಯ, ಸೂರ್ಯಾಸ್ತಮಯ ಸವಿಯಬಹುದು. ಮುಂಜಾವ ಮತ್ತು ಮುಸ್ಸಂಜೆಯ ತಣ್ಣನೆಯ ತಂಬೆಳಕಿಗೆ ಮೈಯ್ಯೊಡ್ಡಿ ಸುಖಿಸಬಹುದು.

ಬೇಕಲ ಕೋಟೆಯಲ್ಲಿ ಈ ಹಿಂದೆ ಬೆಳಿಗ್ಗೆ 8.30ಕ್ಕೆ ಸಂದರ್ಶಕರನ್ನು ಒಳಬಿಡುತ್ತಿದ್ದರು. ಹಾಗೆಯೇ ಸಂಜೆ 6ಕ್ಕೆ ಪ್ರವೇಶ ರದ್ದಾಗುತಿತ್ತು. ಇದರಿಂದಾಗಿ ಪ್ರವಾಸಿಗರಿಗೆ ಮಂಜಾವ,ಮುಸ್ಸಂಜೆಗಳನ್ನಿಲ್ಲಿ ಸವಿಯಲಾಗುತ್ತಿರಲಿಲ್ಲ. ಈಗ ಇದಕ್ಕೆ ಪರಿಹಾರ ಎಂಬಂತೆ ಪ್ರಾಚ್ಯ ವಸ್ತು ಇಲಾಖೆ ಸಮಯವನ್ನು ಪರಿಷ್ಕರಿಸಿದೆ.

ಬೆಳಿಗ್ಗೆ 6.30ರಿಂದ ಇನ್ನು ಪ್ರವೇಶ ಆರಂಭಗೊಂಡು ಸಂಜೆ 6.30ಕ್ಕೆ ಪ್ರವೇಶ ರದ್ದಾಗಲಿದೆ. ಈ ಹಿಂದಿನದ್ದಕ್ಕಿಂತ 2ತಾಸು ಹೆಚ್ಚಿಸಲಾಗಿದೆ. ಆದರೆ ಬೇಕಲ ಕೋಟೆಯಲ್ಲಿ ಸಂಜೆಯ ಸೂರ್ಯಾಸ್ತಮಾನ ಸಹಿತ ಮುಸ್ಸಂಜೆಯ ಸೊಬಗೂ ಸೇರಿದಂತೆ ರಾತ್ರಿಯ ಲೈಟಿಂಗ್ ಸವಿಯಲು ಅವಕಾಶ ಒದಗುವಂತೆ ಸಮಯವನ್ನು 9ಗಂಟೆಯ ತನಕ ವಿಸ್ತರಿಸಬೇಕೆಂದು ಸಾರ್ವಜನಿಕರ ಒತ್ತಾಯವಿದೆ.
ಅಂತರ್ರಾಷ್ಟ್ರೀಯ ಪ್ರವಾಸಿತಾಣವಾದ ಬೇಕಲಕೋಟೆಯು ಪ್ರಾಚೀನ ಕಾಸರಗೋಡಿನ ಕನ್ನಡದ ಅರಸೊತ್ ಸಂಕೇತವಾಗಿದ್ದು, ಇದು ದೇಶದ ಪಾರಂಪರಿಕ ತಾಣದ ಪರಿಗಣನೆಯಲ್ಲಿದೆ
ನಿತ್ಯ ನಿರಂತರ ಕಡಲು ಕೋಟೆಗೆ ಮುತ್ತಿಡುತ್ತಲೇ ಇರುವ ಬೇಕಲಕೋಟೆಯ ಸೌಂದರ್ಯ ಅನನ್ಯವಾಗಿದ್ದು, ಇಲ್ಲಿ ರಾತ್ರಿಕಾಲ ಕೋಟೆಯ ಇತಿಹಾಸ ಸಾರುವ ಲೈಟ್ ಶೋ ಆರಂಭಿಸಬೇಕೆಂಬ ಬೇಡಿಕೆಗಳಿವೆ.

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00