*ಕಣಿಪುರ ಸುದ್ದಿಜಾಲ(ಅ.2)
ಕುಂಬಳೆ: ಆಲ್ ಕೇರಳ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಕುಂಬಳೆ ವಲಯ ಸಮ್ಮೇಳನವು ಕುಂಬಳೆ ಮಾಧವ ಪೈ ಸಭಾಂಗಣದ ವಿ. ವಿಚಂದ್ರನ್ ವೇದಿಕೆಯಲ್ಲಿ ಮಂಗಳವಾರ ಜರಗಿತು.
ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಧ್ವಜಾರೋಹಣಗೈದು ಅಧ್ಯಕ್ಷತೆ ವಹಿಸಿದರು.
ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಸಮ್ಮೇಳನ ಉದ್ಘಾಟಿಸಿ “ಸಂಘಟನಾತ್ಮಕ ವಿಚಾರಗಳನ್ನು ಹಂಚಿಕೊಡರು. ಸಂಘಟನೆಯ ಓರ್ವ ಸದಸ್ಯನಾಗಿ ತಾನೇನು ಮಾಡಬೇಕು? ತನ್ನ ಕರ್ತವ್ಯ ಏನು ಎಂಬುದನ್ನು ವಿವರಿಸುತ್ತಾ ಛಾಯಾಗ್ರಾಹಕರು ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಅಧ್ಯಯನವನ್ನು ಮಾಡಬೇಕು. ನಿರಂತರ ಬದಲಾಗುತ್ತಿರುವ ಛಾಯಾಗ್ರಹಣ ರಂಗದ ನೂತನ ಆವಿಷ್ಕಾರಗಳನ್ನು ಸಕಾಲಿಕ ತಿಳಿದು ಇಂದಿನ ಜನತೆಗೆ ಏನು ಬೇಕು ಎಂಬುದನ್ನು ನಾವು ನೀಡಬೇಕು. ನಮ್ಮೀ ಉದ್ದಿಮೆಗೆ ಎದುರಾಗುವ ಯಾವುದೇ ಸಮಸ್ಯೆಗಳಿಗೆ ತಕ್ಕ ಉತ್ತರವನ್ನು ನೀಡುವಲ್ಲಿ ಸಂಘಟನೆ ಸಿದ್ಧವಾಗಿದೆ ಎಂದರು.
ರಾಜ್ಯಸಮಿತಿ ಸದಸ್ಯ ಪ್ರಶಾಂತ್ ತೈಕಡಪ್ಪುರಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ., ಉಪಾಧ್ಯಕ್ಷರುಗಳಾದ ವೇಣು ವಿ.ವಿ., ಶರೀಫ್, ಜೊತೆಕಾರ್ಯದರ್ಶಿ ರಾಜೇಂದ್ರನ್, ನೇಚರ್ ಕ್ಲಬ್ ಸಂಚಾಲಕ ದಿನೇಶ್ ಇನ್‌ಸೈಟ್, ಅಶೋಕನ್ ಪೊಯಿನಾಚಿ, ಸುಕು ಸ್ಮಾರ್ಟ್, ಅನೂಪ್ ಚಂದೇರ, ವಿಜಯನ್ ಶೃಂಗಾರ್, ವೇಣುಗೋಪಾಲ ಎ., ಸುರೇಶ್ ಆಚಾರ್ಯ, ಅಬ್ದುಲ್ ನವಾಸ್, ನವೀನ್ ಕುಮಾರ್, ಶ್ಯಾಮಪ್ರಸಾದ ಸರಳಿ ಪಾಲ್ಗೊಂಡು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ಹಾಗೂ ಪ್ಲಸ್‌ಟು ವಿನಲ್ಲಿ ಎಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಲಯ ಕಾರ್ಯದರ್ಶಿ ನಿತ್ಯಪ್ರಸಾದ್ ಸ್ವಾಗತಿಸಿ, ಪಿ.ಆರ್.ಒ. ಪ್ರಮೋದ್ ಕುಂಬಳೆ ವಂದಿಸಿದರು.