ಕಾಶಿಯಲ್ಲಿ ಸಾಯಿಬಾಬ ಪೂಜೆಗೆ ವಿರೋಧ: 10ದೇಗುಲಗಳಿಂದ ವಿಗ್ರಹ ತೆರವು, ಬಾಬ ಹಿಂದೂ ದೇವರಲ್ಲ ಎಂದ ಸನಾತನ ದಳ

by Narayan Chambaltimar

ನ್ಯೂಸ್ ಏಜೆನ್ಸಿ ವರದಿ

ಲಖನೌ: ಸಾಯಿಬಾಬ ಪೌರಾಣಿಕ ದೇವರಲ್ಲ ಎಂಬ ಅಭಿಪ್ರಾಯದೊಂದಿಗೆ ಉತ್ತರಪ್ರದೇಶದ (ಕಾಶಿ) ವಾರಾಣಸಿಯಲ್ಲಿ ಹಿಂದೂ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಕೆಲವು ದೇವಾಲಯಗಳಿಂದ ಶಿರಡಿ ಸಾಯಿಬಾಬ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ.
ದೇವಾಲಯಗಳಲ್ಲಿ ಇತರ ದೇವತಾ ಪ್ರತಿಷ್ಠೆಯ ಜತೆ ಸಾಯಿಬಾಬ ಪೂಜೆಗೊಳ್ಳುವುದನ್ನು ಆಕ್ಷೇಪಿಸಿದ ಸನಾತನ ರಕ್ಷಕ ದಳ ಮತ್ತು ಬ್ರಾಹ್ಮಣ ಸಭಾ “ನಾವು ಸಾಯಿಬಾಬ ವಿರೋಧಿಯಲ್ಲ, ಆದರೆ ದೇವತಾ ವಿಗ್ರಹಗಳ ಜತೆ ಅವರ ಮೂರ್ತಿ ಪೂಜೆಗೆ ದೇಗುಲಗಳಲ್ಲಿ ಅವಕಾಶ ನೀಡಬಾರದು” ಎಂದು ಅಭಿಪ್ರಾಯ ಪಟ್ಟಿದೆ.

ವಾರಾಣಸಿಯಲ್ಲಿ ಸಾಯಿಬಾಬಾ ಪೂಜೆ ಸರಿಯಲ್ಲ ಎಂಬ ಕಾರಣ ನೀಡಿ ‘ಸನಾತನ ರಕ್ಷಕ ದಳ’ ಎಂಬ ಸಂಘಟನೆ ಆರಂಭಿಸಿರುವ ಅಭಿಯಾನದ ಭಾಗವಾಗಿ ನಗರದ 10ಕ್ಕೂ ಹೆಚ್ಚೂ ದೇಗುಲಗಳಲ್ಲಿನ ಸಾಯಿಬಾಬಾ ಪ್ರತಿಮೆಗಳನ್ನು ಮಂಗಳವಾರ ತೆರವು ಮಾಡಿರುವ ಈ ಬೆಳವಣಿಗೆ ಶಿರಡಿ ಭಕ್ತರಲ್ಲಿ ವಿಷಾದ ಮೂಡಿಸಿದೆ

‘ಕಾಶಿ (ವಾರಾಣಸಿ)ಯಲ್ಲಿ ಕೇವಲ ಶಿವನನ್ನು ಪೂಜಿಸಬೇಕು. ಧರ್ಮಗ್ರಂಥಗಳ ಪ್ರಕಾರ ಸಾಯಿಬಾಬಾ ಪೂಜೆ ನಿಷಿದ್ಧ. ಅದರ ಜ್ಞಾನವಿಲ್ಲದೆ ಪೂಜೆ ನಡೆಸಲಾಗುತ್ತಿತ್ತು. ಈಗಾಗಲೇ 10 ದೇವಸ್ಥಾನಗಳಿಂದ ಪ್ರತಿಮೆ ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಅಗಸ್ತ್ಯಕುಂಡ ಮತ್ತು ಭೂತೇಶ್ವರ ದೇವಸ್ಥಾನದಲ್ಲಿರುವ ಪುತ್ಥಳಿ ತೆರವುಗೊಳಿಸಲಾಗುವುದು’ ಎಂದು ದಳದ ಅಧ್ಯಕ್ಷ ಅಜಯ್‌ ಶರ್ಮಾ ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ..

ಇನ್ನೊಂದೆಡೆ ಅಯೋಧ್ಯೆಯ ಹನುಮಾನ್‌ಗಢಿ ದೇಗುಲದ ಮಹಾಂತ ರಾಜು ದಾಸ್‌ ಮಾತನಾಡಿ, ‘ಸಾಯಿಬಾಬಾ ಧರ್ಮ ಗುರು ಆಗಬಹುದು, ಮಹಾಪುರುಷ ಆಗಬಹುದು, ಆದರೆ ದೇವರಾಗಲು ಸಾಧ್ಯವಿಲ್ಲ’ ಎಂದು ತೆರವು ಸಮರ್ಥಿಸಿಕೊಂಡಿದ್ದಾರೆ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00