ಕಾಳಿಕಾಂಬಾ 50ರ ಸರಣಿ : ಮಂಗಳೂರು ಬೋಳಾರದಲ್ಲಿ ಜಯದ್ರಥ ಪರಿಭವ ತಾಳಮದ್ದಳೆ

by Narayan Chambaltimar

ಮಂಗಳೂರು : ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳಾರ ಮಂಗಳೂರು ಕ್ಷೇತ್ರದ ಸರಸ್ವತಿ ಯಕ್ಷಗಾನ ಮಂಡಳಿಯ ಸಹಯೋಗದಲ್ಲಿ
ಶ್ರೀ ಕ್ಷೇತ್ರದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ, ಉಪ್ಪಿನಂಗಡಿ ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 48ನೇ ತಾಳಮದ್ದಳೆಯಾಗಿ
ಜಯದ್ರಥ ಪರಿಭವ ಜರಗಿತು.

ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ನಿತೀಶ್ ಕುಮಾರ್. ವೈ, ಹಿಮ್ಮೇಳದಲ್ಲಿ
ಶ್ರೀಪತಿ ಭಟ್ ಉಪ್ಪಿನಂಗಡಿ, ದಯಾನಂದ ಕೋಡಿಕಲ್,ರಾಜೇಶ್ ಉಳಿಪಾಡಿ ಮತ್ತುಅರ್ಥಧಾರಿಗಳಾಗಿ
ಅಂಬಾ ಪ್ರಸಾದ ಪಾತಾಳ(ದ್ರೌಪದಿ), ಜಯರಾಮ ಭಟ್ ದೇವಸ್ಯ(ಕೌರವ, ಧರ್ಮರಾಯ )ಹರೀಶ ಆಚಾರ್ಯ ಬಾರ್ಯ (ಜಯದ್ರಥ) ದಿವಾಕರ ಆಚಾರ್ಯ ಗೇರುಕಟ್ಟೆ ( ದೌಮ್ಯ ಮುನಿ ಮತ್ತು ಈಶ್ವರ )
ಶ್ರೀಧರ ಎಸ್ಪಿ ಸುರತ್ಕಲ್(ಭೀಮ )
ಶ್ರುತಿ ವಿಸ್ಮಿತ್ ಬಲ್ನಾಡು ( ಅರ್ಜುನ)ಭಾಗವಹಿಸಿದ್ದರು.

ಯಕ್ಷಗಾನ ಪ್ರದರ್ಶನ ಅಥವಾ ತಾಳಮದ್ದಳೆಗಳಲ್ಲಿ ಕಾಣಿಸಿಕೊಳ್ಳದ ಈ ಪ್ರಸಂಗದ ತಾಳಮದ್ದಳೆಯನ್ನು ಉತ್ತಮವಾಗಿ ನಿರ್ವಹಿಸಿದ ಬಗ್ಗೆ ಸಂಯೋಜಕರು ಮತ್ತು ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಬಿ. ಅಶೋಕ್ ಕುಮಾರ್, ಪ್ರದಾನ ಅರ್ಚಕ ನಾರಾಯಣ ವಿ. ಭಟ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ ಎಸ್. ಪಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ
ಶ್ರೀದೇವಿಯ ಶೇಷ ವಸ್ತ್ರ,ಪ್ರಸಾದ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00