ಕೇರಳ ವ್ಯಾಪಕ ಹಂದಿಕಾಟ, ಭೇಟೆಯಾಡಿ ನಿಗ್ರಹಿಸಲು ಯೋಜನೆ : ತಜ್ಞರ ದಳ ರಚಿಸಲು ಅರಣ್ಯ ಇಲಾಖೆ ಪರಿಗಣನೆ

by Narayan Chambaltimar

ಕಣಿಪುರ ಸುದ್ದಿಜಾಲ (ಸೆ.28

ಕೇರಳದೆಲ್ಲಡೆ ಕಾಡು ಹಂದಿ ಸಂಖ್ಯೆ ವಿಪರೀತ ಏರಿಕೆಯಾಗಿದ್ದು, ಇದೀಗ ಇವುಗಳು ನೆಮ್ಮದಿಯ ಜನಜೀವನಕ್ಕೆ ಕಂಟಕವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಜನವಾಸ ಕೇಂದ್ರದಲ್ಲಿ ಉಪಟಳ ನೀಡುವ ಹಂದಿಗಳನ್ನು ಗುಂಡಿಕ್ಕಿ ಭೇಟೆಯಾಡಿ ಹತ್ಯೆಗೈಯ್ಯಲು ಸ್ವತಃ ಅರಣ್ಯ ಇಲಾಖೆಯೇ ನಿರ್ಧರಿಸಿದೆ.

ಹಾಗೆಂದು ಯಾರು ಬೇಕಿದ್ದರೂ ಹಂದಿಗೆ ಗುಂಡಿಕ್ಕಿ ಹತ್ಯೆಗೈದು, ಹಂದಿ ಎಗರಿಸುವಂತಿಲ್ಲ. ಹಂದಿ ಭೇಟೆಗೆ ತಜ್ಞರ ನಿಗ್ರಹ ದಳ ರೂಪಿಸುವಂತೆ ಅರಣ್ಯ ಇಲಾಖೆ ಯೋಜನೆ ಹಾಕಿದೆ. ಅ.3ಕ್ಕೆ ಈ ಸಂಬಂಧ ಸಚಿವ ಎ ಕೆ. ಶಶೀಂದ್ರನ್ ನೇತೃತ್ವದಲ್ಲಿ ಸಭೆಸೇರಿ ಅಂತಿಮ ನಿರ್ಣಯವಾಗಲಿದೆ.

ಕಾಡು ಹಂದಿಯ ಉಪಟಳ ಕೃಷಿಕರಿಗಷ್ಟೇ ಅಲ್ಲ ಇದೀಗ ಸಾರ್ವಜನಿಕರ ಮುಕ್ತ ರಸ್ತೆ ಸಂಚಾರಕ್ಕೂ ತೊಡಕಾಗಿದೆ. ಕಾಡು ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಹಂದಿಗಳ ಕಾಟ ನಗರ, ಪಟ್ಟಣ ಪ್ರದೇಶಕ್ಕೂ ವ್ಯಾಪಿಸಿ ಮುಂಜಾನೆಯ ನಡಿಗೆ, ರಾತ್ರಿಯ ರಸ್ತೆ ಸಂಚಾರಕ್ಕೆ ಅಪಾಯದ ತೊಡಕಾಗಿವೆ. ಹಂದಿಯ ಓಡಾಟಗಳಿಂದ ನೂರಾರು ಮಂದಿ ವಾಹನ ಅಪಘಾತಕ್ಕೀಡಾದರೆ ಇನ್ನನೇಕರು ಹಂದಿ ಆಕ್ರಮಣಕ್ಕೆ ತುತ್ತಾಗಿದ್ದಾರೆ. ರಾಜ್ಯ ವ್ಯಾಪಕ ಇಂಥ ಘಟನೆಗಳು ದೈನಿಕ ವರದಿಯಾಗುವುದರಿಂದ ವಿಷಯದ ಗಂಭೀರತೆಯನ್ನರಿತು ನಿಗ್ರಹ ದಳ ರಚಿಸುವ ಕುರಿತು ಸಚಿವರು ತಜ್ಞರ ಜತೆ ಚಿಂತಿಸಿದ್ದಾರೆ.

ಈ ವಿಷಯದಲ್ಲಿ ಪರಿಣತರನ್ನಷ್ಟೇ ಜೋಡಿಸಿ ನಿಗ್ರಹ ದಳ ರಚಿಸಲಾಗುವುದು. ವಿವಿಧ ಇಲಾಖೆಗಳಿಂದ ನಿವೃತ್ತರಾದವರು, ನಿವೃತ್ತ ಸೈನಿಕರು, ಪಳಗಿದ ಊರತಜ್ಞರು, ರೈಫಿಲ್ ಕ್ಲಬ್ ನ ಸದಸ್ಯರನ್ನುವ ಆಯ್ದು ಅರಣ್ಯ ಇಲಾಖೆಯ ಮೂಲಕ ಹಂದಿ ಭೇಟೆಗೆ ನಿಗ್ರಹ ದಳ ರಚನೆಗೆ ಆಲೋಚಿಸಲಾಗಿದೆ.
ಹಂದಿ ಕಾಟ ನಿಯಂತ್ರಣಕ್ಕೆ ಈಗಾಗಲೇ ಸ್ಥಳೀಯಾಡಳಿತಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಆದರೆ ಹಂದಿಯನ್ನು ಕ್ಷುದ್ರಜೀವಿ ಎಂದು ಘೋಷಿಸುವ ಅಧಿಕಾರ ಕೇಂದ್ರದ್ದಾಗಿದೆ. ಕೇರಳದ ಸಾಮಾಜಿಕ ಬದುಕಿಗೆ ಹಂದಿ ಉಪಟಳ ತೀವ್ರ ತೊಂದರೆಯಾಗಿ ಮಾರ್ಪಟ್ಟಿರುವುದರಿಂದ ಪರಿಹಾರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಕೇಂದ್ರವನ್ನು ಒತ್ತಾಯಿಸಿದೆ.

🔴 ಹಂದಿಗಳ ಏರಿಕೆ ಮತ್ತು ವ್ಯಾಪ್ತಿ ವಿಸ್ತರಣೆಗೇನು ಕಾರಣ?
——————–
ಹಂದಿಗಳು ನಾಡು,ಕಾಡು ಬೇಧವಿಲ್ಲದೇ ಕಾಣಿಸುತ್ತಿದ್ದು , ನಾಗರಿಕ ಜನಜೀವನಕ್ಕೆ ತೀವ್ರ ಉಪಟಳವಾಗಿ ಬದಲಾಗಿದೆ. ಹಿಂದೆ ಗ್ರಾಮೀಣ ವನಪ್ರದೇಶಕ್ಕಂಟಿದ ಊರಲ್ಲಷ್ಟೇ ಕಂಡುಬರುತ್ತಿದ್ದ ಹಂದಿಗಳು ಈಗ ಪೇಟೆ ಪರಿಸರದಲ್ಲೂ ರಾತ್ರಿ ವೇಳೆ ಕಾಣಿಸುತ್ತಿದೆ. ಇದಕ್ಕೆ ಮಾಲಿನ್ಯ ವ್ಯಾಪಕವಾಗುವುದೇ ಕಾರಣವಾಗಿದೆ. ಪೇಟೆ,ಪಟ್ಟಣದಲ್ಲಿ ತ್ಯಾಜ್ಯ ಮಾಲಿನ್ಯಗಳು ಸೇವನೆಗೆ ದೊರೆಯುವುದರಿಂದ ಹಂದಿಗಳು ಅಡಗುತಾಣ ಆಶ್ರಯಿಸಿ ಎಲ್ಲೆಡೆ ವ್ಯಾಪಿಸುತ್ತಿವೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00