ನೂರಾರು ಸಲ ಸಾಗಿದ ದಾರಿಯಲ್ಲೇ ಪುಷ್ಪಾರ್ಚನೆ ಪಡೆದ ಅರ್ಜುನ್ ಅಸ್ಥಿ..!!

ಪಾರ್ಥಿವ ದೇಹಕ್ಕೆ ಶನಿವಾರ ಬೆಳಿಗ್ಗೆ ಕೇರಳದ ಅಂತ್ಯಾಜಲಿ..

by Narayan Chambaltimar

ಇದೊಂದು ಹೃದಯ ವಿದ್ರಾವಕ ಘಟನೆ. ಬಹುಶಃ ದೇಶದ ಮತ್ತೊಬ್ಬ ಯಾವನೇ ಲಾರಿ ಚಾಲಕನಿಗೂ ಸಿಗದ ಅಂತ್ಯೋಪಚಾರದ ಸರಕಾರೀ ಗೌರವ..!

ಸತತ 72ದಿನಗಳ ನಿರಂತರ ಶೋಧಕಾರ್ಯದ ಬಳಿಕ ಅಂಕೋಲಾ ತಾಲೂಕಿನ ಶಿರೂರು ಭೂಕುಸಿತದಲ್ಲಿ ಲಾರಿ ಸಹಿತ ಕೊಚ್ಚಿಹೋದ ಕೇರಳದ ಚಾಲಕ ಅರ್ಜುನ್ ಪಾರ್ಥಿವ ಶರೀರದ ಅಸ್ಥಿ ನೂರಾರು ಸಲ ಸಾಗಿ ಹೋದ ಅದೇ ದಾರಿಯಲ್ಲಿಂದು ರಾತ್ರಿ ಕೇರಳಕ್ಕಾಗಮಿಸುವಾಗ ಸರಕಾರೀ ಗೌರವದ ಪುಷ್ಪಾರ್ಚನೆ ಪಡೆಯಿತು..!
ಅದೂ ಕಾಸರಗೋಡಿನ ಹೃದಯಭಾಗವಾದ ಬಸ್ಟೇಂಡಿನಲ್ಲಿ ನಡುರಾತ್ರಿ..!!

 

ಭೂಕುಸಿತದಲ್ಲಿ ಲಾರಿ ಸಹಿತ ಕೊಚ್ಚಿಹೋದ ಕೇರಳದ ಚಾಲಕ ಅರ್ಜುನ್ ಪಾರ್ಥಿವ ಶರೀರದ ಅಸ್ಥಿ ನೂರಾರು ಸಲ ಸಾಗಿ ಹೋದ ಅದೇ ದಾರಿಯಲ್ಲಿಂದು ರಾತ್ರಿ ಕೇರಳಕ್ಕಾಗಮಿಸುವಾಗ ಸರಕಾರೀ ಗೌರವದ ಪುಷ್ಪಾರ್ಚನೆ ಪಡೆಯಿತು..!
ಅದೂ ಕಾಸರಗೋಡಿನ ಹೃದಯಭಾಗವಾದ ಬಸ್ಟೇಂಡಿನಲ್ಲಿ ನಡುರಾತ್ರಿ..!!
ಕೇರಳಕ್ಕೆ ಕೇರಳವನ್ನೇ ಕೌತುಕ, ನಿರೀಕ್ಷೆಗಳ ಸೂಜಿಮೊನೆಯಲ್ಲಿ ನಿಲ್ಲಿಸಿದ ಗಂಗಾವಳಿ ನದಿಯ ರಕ್ಕಸ ಸದೃಶ ಪ್ರವಾಹದ ಸದ್ದಡಗಿದ ಮೇಲೆ ದೊರೆತ ಅಸ್ಥಿಗೆ ಜಿಲ್ಲಾಧಿಕಾರಿ ಸಹಿತ ಜಿಲ್ಲಾಡಳಿತ ಪ್ರಮುಖರು ಸರಕಾರೀ ಗೌರವದ ನಮನ ಸಲ್ಲಿಸಿದರು.

 

ಶಿರೂರಿನ ಗುಡ್ಡ ಕುಸಿತದಲ್ಲಿ ಗಂಗಾವಳಿ ನದಿಯ ಪಾಲಾದ ಅರ್ಜುನ್ ಸಹಿತ ನಜ್ಜುಗುಜ್ಜಾದ ಲಾರಿ ನಿನ್ನೆ ಮಧ್ಯಾಹ್ನ 72ದಿನಗಳ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿತ್ತು. ಲಾರಿಯ ಕ್ಯಾಬಿನ್ ನಲ್ಲೇ ಛಿದ್ರಗೊಂಡ ಸ್ಥಿತಿಯಲ್ಲಿದ್ದ ಪಾರ್ಥಿವ ಶರೀರದ ಅಸ್ಥಿಯನ್ನು ಇಂದು ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ನಡೆಸಿದ ಡಿಎನ್ಎ ಪರೀಕ್ಷೆಯಲ್ಲಿ ಅರ್ಜುನನದ್ದೆಂದೇ ದೃಡೀಕರಿಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಚಾಲಕ ಅರ್ಜುನನ ಸೋದರಿಯ ಪತಿ ಜಿತಿನ್ ಮತ್ತು ಸಹೋದರ ಅಭಿಜಿತ್ ಪಾರ್ಥಿವ ದೇಹವನ್ನು ಸ್ವೀಕರಿಸಿಕೊಂಡರು. ಬಳಿಕ ಕರ್ನಾಟಕ ಸರಕಾರದ ಆಂಬುಲೆನ್ಸ್ ನಲ್ಲಿ ಕೇರಳದ ಕಲ್ಲಿಕೋಟೆಗೆ ತೆರಳಿದ ಪಯಣ ಮತ್ತದೇ ಶಿರೂರಿನ ದುರ್ಘಟನೆ ನಡೆದ ಗಂಗಾವಳಿ ತೀರದಲ್ಲಿ ನಿಲುಗಡೆಗೊಂಡು ಕಂಬನಿ ಮಿಡಿಯಲಾಯಿತು. ಕಾರವಾರ ಶಾಸಕ ಸತೀಶ್ ಕೃಷ್ಣ ಸೆಂಥಿಲ್ ಹಾಗೂ ಕೇರಳ ಗಡಿನಾಡಿನ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಬಳಗದವರು ಪಾರ್ಥಿವ ಶರೀರದ ಜತೆಗಿದ್ದಾರೆ. ಬೆಳಿಗ್ಗೆ ಕೋಝಿಕ್ಕೋಡ್ ಕನ್ನಾಡಿಕ್ಕಲ್ ಎಂಬಲ್ಲಿರುವ ಅರ್ಜುನನ ಮನೆಗೆ ಅಳಿದುಳಿದ ಅಸ್ಥಿಗೂಡು ತಲುಪಲಿದ್ದು, ಸಾರ್ವಜನಿಕ ದರ್ಶನದ ಬಳಿಕ ಅಂತ್ಯ ಕ್ರಿಯೆ ನಡೆಯಲಿದೆ.

ಕಾರವಾರ ಶಾಸಕರು ಕರ್ನಾಟಕ ಸರಕಾರದ ಪರವಾಗಿ ಅರ್ಜುನ್ ತಾಯಿಗೆ 5ಲಕ್ಷರೂ ಪರಿಹಾರ ಧನ ಪ್ರಕಟಿಸಿದ್ದು, ಇದು ಬೆಳಿಗ್ಗೆ ಅಮ್ಮನಿಗೆ ಹಸ್ತಾಂತರವಾಗಲಿದೆ. ಅಂತ್ಯ ಸಂಸ್ಕಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಶಾಸಕರು ಭಾಗವಹಿಸಲಿದ್ದು, ಅರ್ಜುನ್ ಕುಟುಂಬವನ್ನು ಸಂತೈಸುವರು.

ಕರುಳು ಹಿಂಡುವ ಆಟಿಕೆಗಳು..
ಮರದ ದಿಮ್ಮ ಹೇರಿಕೊಂಡು ಕೇರಳಕ್ಕೆ ಬರುತ್ತಿದ್ದ ಅರ್ಜುನ್ ಈ ಬಾರಿ ಮಗನಿಗೆ ಆಟವಾಡಲೆಂದೇ ಆಟಿಕೆಗಳನ್ನು ಖರೀದಿಸಿದ್ದರು. ಅದರಲ್ಲಿ ತಾನು ಓಡಿಸುವಂಥದ್ದೇ ಮಾದರಿಯ ಲಾರಿ ಸಹಿತ ಇನ್ನಿತರ ವಸ್ತುಗಳೂ ಇದ್ದವು. ಭೂಕುಸಿತದಲ್ಲಿ ಕೊಚ್ಚಿ ಹೋಗಿ ಪ್ರವಾಹ ಪಾಲಾಗಿ 72ದಿನದ ಬಳಿಕ ನದಿಯೊಳಗಿನ ಪ್ರಪಾತದಿಂದ ಲಾರಿಯನ್ನು ಪತ್ತೆ ಮಾಡಿದಾಗ ಕ್ಯಾಬಿನ್ ನಲ್ಲಿ ಅರ್ಜುನನ ಅಸ್ಥಿಯ ಜತೆ ಆಟಿಕೆಗಳೂ ಇದ್ದುವು!!
ಜತೆಗೆ ಫೋನು, ಚಪ್ಪಲಿ, ಉಡುಪು ಇನ್ನಿತ್ಯಾದಿಗಳೂ ಸಿಕ್ಕಿದ್ದವು. ಇನ್ನಿದು ಅರ್ಜುನನ ಮನೆಯ ಪಾಲಿಗೆ ಆಶ್ರಯದಾತನ ನೆನಪುಗಳ ಸ್ಮಾರಕವಲ್ಲದೇ ಮತ್ತೇನು..?

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00