43
ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಕಾಸರಗೋಡು ಘಟಕದ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಕಾಸರಗೋಡು ಐಎಂಎ ಘಟಕದಲ್ಲಿ ನಡೆದ ಜನರಲ್ ಬೋಡಿ ಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಡಾ. ಹರಿಕಿರಣ್ ಬಂಗೇರ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಡಾ. ಅಣ್ಣಪ್ಪ ಕಾಮತ್, ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಬಿ.ನಾರಾಯಣ ನಾಯ್ಕ್,
ಉಪಾಧ್ಯಕ್ಷರಾಗಿ ಡಾ. ಖಾಸಿ ಟಿ, ಡಾ. ಸುಧಾ ಭಟ್, ಜತೆ ಕಾರ್ಯದರ್ಶಿಗಳಾಗಿ ಡಾ. ಗೋಪಾಲಕೃಷ್ಣ ಪಿ, ಖಜಾಂಜಿಯಾಗಿ ಡಾ. ಅನೂಪ್ ಆಯ್ಕೆಗೊಂಡರು. ಡಾ.ಜನಾರ್ಧನ ನಾಯ್ಕ್ ಸಿ.ಎಚ್. ಚುನಾವಣಾಧಿಕಾರಿಯಾಗಿದ್ದರು.