120
ಉತ್ತರಕನ್ನಡದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾದ ಕೇರಳದ ಕೋಝಿಕ್ಕೋಡ್ ನಿವಾಸಿ ಚಾಲಕ ಅರ್ಜುನ್ ಮತ್ತು ಆತ ಚಲಾಯಿಸಿದ ಲಾರಿ ಪತ್ತೆಯಾಗಿದೆ. ಶಿರೂರಿನ ಗಂಗಾವಳಿ ಹೊಳೆಯಲ್ಲಿ ಡ್ರಜ್ ಬಳಸಿ ನಡೆಸಿದ ಹುಡುಕಾಟದಲ್ಲಿ ಇಂದು ಮಧ್ಯಾಹ್ನ ಲಾರಿ ಮತ್ತು ಅದರೊಳಗೆ ಅಸ್ಥಿ ಪತ್ತೆಯಾಗಿದೆ.
ಸತತ,71ದಿನಗಳ ನಿರಂತರ ಹುಡುಕಾಟದ ಬಳಿಕ ಲಾರಿಯನ್ನು ಪತ್ತೆ ಹಚ್ಚಿ ಮೇಲೆತ್ತಲಾಗಿದೆ. ಲಾರಿಯ ಕ್ಯಾಬೀನ್ ಒಳಗೆ ಚಾಲಕ ಅರ್ಜುನನದ್ದೆಂದು ಹೇಳಲಾದ ಅಸ್ಥಿಪಂಜರವೂ ಇದೆಯೆಂಬುದನ್ನು ಖಚಿತಪಡಿಸಲಾಗಿದೆ. ಇದನ್ನು ಡಿಎನ್ ಎ ಟೆಸ್ಟ್ ಮೂಲಕ ದೃಢೀಕರಿಸುವ ಕೆಲಸವಷ್ಟೇ ಬಾಕಿ ಇದ್ದು, ಲಾರಿಯನ್ನು ದಡಕ್ಕೆ ಸೇರಿಸಲಾಗಿದೆ.
ಪತ್ತೆಯಾಗಿ ಮೇಲೆತ್ತಿದ ಲಾರಿ ತನ್ನದ್ದು ಹೌದೆಂದು ಮಾಲಕ ಮನಾಫ್ ದೃಢೀಕರಿಸಿದ್ದಾರೆ.
ಮರದ ದಿಮ್ಮಿಗಳ ಸಹಿತ ಕೇರಳಕ್ಕೆ ಬರುತ್ತಿದ್ದ ಲಾರಿ ಭೂಕುಸಿತದಲ್ಲಿ ಚಾಲಕನ ಸಹಿತ ನದೀಪ್ರವಾಹ ಪಾಲಾಗಿತ್ತು. ಬಳಿಕ ನಡೆದ ಹುಡುಕಾಟ ಪ್ರಕ್ರಿಯೆ ಇಡೀ ರಾಜ್ಯವನ್ನೇ ಸೂಜಿ ಮೊನೆಯಲ್ಲಿ ನಿಲ್ಲಿಸಿತ್ತು