183
ಪೇಟೆಗೆ ಹಸಿರು ಹೊದಿಸುವ ಪರಿಕಲ್ಪನೆಯಂತೆ ಪೇಟೆಯ ರಸ್ತೆಯ ಡಿವೈಡರ್ ಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಿಂದ ಪಂಚಾಯತ್ ನೇತೃತ್ವದಲ್ಲಿ ಗಿಡ ನೆಡಲಾಗುತ್ತಿದೆ.
ಪೇಟೆಯ ರಸ್ತೆ ಡಿವೈಡರಿನುದ್ದಕ್ಕೂ ಗಿಡನೆಟ್ಟು ಬೆಳೆಸಿ ಪೇಟೆಯ ಸೌಂದರ್ಯ ಮತ್ತು ನೆರಳು ನೀಡುವ ಯೋಜನೆ ಇದಾಗಿದೆ.
ಇದರಂತೆ ಪೇಟೆಯ ಡಿವೈಡರ್ ಗಳಲ್ಲಿ ಪೆರ್ಲ ಸ.ನಾ. ಹೈಸ್ಕೂಲು ಅಧ್ಯಾಪಕ ಡಾ. ಸತೀಶ ಪುಣಿಂಚಿತ್ತಾಯ ಮತ್ತು ಶಾಲಾ ವಿದ್ಯಾರ್ಥಿಗಳಾದ ಸೃಜನ್, ಸ್ವೀಕಾರ್, ಸದ್ಭವ್, ವಸಂತ ಮೊದಲಾದವರು ಸಾಲು ಗಿಡಗಳನ್ನು ನೆಟ್ಟರು. ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಗಿಡ ನೆಡುವ ಮೂಲಕ ಉದ್ಘಾಟಿಸಿ, ವಾತಾವರಣದ ಉಷ್ಣತೆ ಏರಿಕೆ ತಡೆಯುವ, ನಮ್ಮ ಪರಿಸರಗಳನ್ನು ಸ್ವಚ್ಛವಾಗಿರಿಸುವ ಮತ್ತು ಭೂಮಿಗೆ ಹಸಿರು ಹೊದಿಸುವ ಕೆಲಸ ಸರಕಾರದ್ದಷ್ಟೇ ಅಲ್ಲ, ನಾಗರಿಕರದ್ದೂ ಹೌದು. ಈ ದೃಷ್ಟಿಯಲ್ಲಿ ಅಧ್ಯಾಪಕ, ವಿದ್ಯಾರ್ಥಿಗಳು ಗಿಡನೆಡಲು ಮುಂದಾದುದು ಶ್ಲಾಘನೀಯ ಎಂದವರು ಹೇಳಿದರು.ಪೆರ್ಲದ ಪ್ರಶಾಂತ್ ಟಿ ಮತ್ತು ದಿನೇಶ್ ಸಹಕರಿಸಿದರು.