ಉಡುಪಿ : ತುಳು ಚಳುವಳಿ ಕನ್ನಡದ ವಿರುದ್ಧವಲ್ಲ, ಇದು ತುಳು ನಾಡ ಜನರ ಆತ್ಮ ನಿರ್ಭರ ಚಳುವಳಿ ಎಂದು ಎಸ್ ಯು ಪಣಿಯಾಡಿ ಅವರು 1928 ಸಪ್ಟೆಂಬರ್ 23ರಂದು ತುಳುವ ಮಹಾಸಭೆ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಹೇಳಿದ್ದರು. ನಾವಿಂದು ಇದೇ ಉದ್ದೇಶದಿಂದ ಕಾರ್ಯಪ್ರವೃತ್ತರಾದರೆ ತುಳುವರ ಸ್ವಾಭಿಮಾನವನ್ನು ಉಳಿಸಿ ಬೆಳೆಸಬಹುದು ಎಂದು ಮುರಳೀಧರ ಉಪಾಧ್ಯ ಹಿರಿಯಡ್ಕ ಇವರು ಅಭಿಪ್ರಾಯಪಟ್ಟರು
ಅವರು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನಡೆದ ತುಳುವ ಚಳುವಳಿಯ ಹರಿಕಾರರಾದ ಎಸ್ ಯು ಪಣಿಯಾಡಿ, ಪೊಳಲಿ ಸೀನಪ್ಪ ಹೆಗ್ಡೆ, ನಾರಾಯಣ ಕಿಲ್ಲೆ ಮೊದಲಾದವರು ಪ್ರಾರಂಭಿಸಿದ ತುಳುವ ಮಹಾಸಭೆ ಯ 96ನೇ ವರ್ಷದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುವರ್ಲ್ಡ್ ಫೌಂಡೇಶನ್ ಮಂಗಳೂರು ಕಾರ್ಯಕ್ರಮವನ್ನು ಆಯೋಜಿಸಿದ್ದು ತುಳುವ ಮಹಾಸಭೆಯ ಎಲ್ಲಾ ಧ್ಯೇಯೋದ್ದೇಶಗಳನ್ನು ಈಡೇರಿಸುವ ಸಲುವಾಗಿ ಕಾರ್ಯ ಪ್ರವೃತ್ತಿಸಲಿದೆ ಹಾಗೂ ಪ್ರಾದೇಶಿಕವಾಗಿ ಅಲ್ಲಲ್ಲಿ ತುಳುವ ಮಹಾಸಭೆ ಪರಸ್ಪರ ಸಹಾಯ ಗುಂಪುಗಳನ್ನು ಮಾಡಲು ಉದ್ದೇಶಿಸಲಾಗಿದೆ ಎಂದು ತುಳುವರ್ಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಲ್ಯಾಯ ಅವರು ಹೇಳಿದರು.
ತುಳುವ ಮಹಾಸಭೆಯ ಪ್ರಥಮ ಸದಸ್ಯತ್ವವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಹಿರಿಯ ತುಳು ಹೋರಾಟಗಾರ ಸಾಂಗ್ಲಿ ದಿವಾಕರ್ ಶೆಟ್ಟಿ ಅವರಿಗೆ ನೀಡಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಚಂದ್ರಹಾಸ ದೇವಾಡಿಗ ಮೂಡಬಿದ್ರೆ, ಈಶ್ವರ್ ಚಿತ್ಪಾಡಿ, ಗಂಗಾಧರ್ ಕಿದಿಯೂರು, ಎಸ್.ಎ. ಕೃಷ್ಣಯ್ಯ ಮೊದಲಾದವರು ಈ ವೇಳೆ ಸದಸ್ಯತನ ಸ್ವೀಕರಿಸಿ ಸಲಹೆ ಮಾರ್ಗದರ್ಶನಗಳನ್ನು ನೀಡಿದರು.
ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ ಮಾತನಾಡಿ ತುಳುವ ಮಹಾಸಭೆಯ ಶತಮಾನೋತ್ಸವ ವೇಳೆ 2028ರ ಸಂದರ್ಭದಲ್ಲಿ ಉಡುಪಿಯಲ್ಲಿ ವಿಶ್ವಮಟ್ಟದಲ್ಲಿ ತುಳುವ ಮಹಾಸಭೆಯನ್ನು ಮಾಡುವುದಾಗಿ ಈ ನಿಟ್ಟಿನಲ್ಲಿ ಈಗಲೇ ಕಾರ್ಯ ಪ್ರವೃತ್ತರಾಗಬೇಕೆಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ತುಳುವರ್ಲ್ಡ್ ಫೌಂಡೇಶನ್ ಉಪಾಧ್ಯಕ್ಷೆ ತಾರಾ ಆಚಾರ್ಯ ಮತ್ತು ಸದಸ್ಯೆ ಯಶೋಧ ಕೇಶವ್ ,
ಮುರಳಿ ಉಪ್ಪಂಗಳ, ಗಿರೀಶ್ ಶೆಟ್ಟಿ, ರಾಮಕೃಷ್ಣ ಕೆ ಎಂ, ಹೇಮಲತಾ ವರ್ಕಾಡಿ, ಸೌಕೇಶ್ ವಿ ಎಸ್ ಕಟಪಾಡಿ, ಸಾಗರ್ ಎಸ್ ಭಂಡಾರಿ, ವತ್ಸಲ ಕೋಟ್ಯನ್, ಮಮತಾ ಎಸ್ ಶೆಟ್ಟಿ, ಸರೋಜಾ ಆರ್ ಶೆಣೈ, ಜ್ಯೋತಿ ಎಸ್ ದೇವಾಡಿಗ, ಸುಶೀಲ ಜಯಕರ, ಉಷಾ, ದಯಾಶಿನಿ, ತಾರಾ ಸತೀಶ್, ದಯಾನಂದ ಕಿದಿಯೂರು, ಸುಮಿತ್ರ ಕೆರೆಮಠ ಮೊದಲಾದವರಿಗೆ ತುಳುವ ಮಹಾಸಭೆಯ ಸದಸ್ಯತ್ವ ನೀಡಿ ವಂದನಾರ್ಪಣೆ ಮಾಡಿದರು.