ಓಣಂ ಕೇರಳ ಮನಸುಗಳ ಜನಮಾನಸದ ಸಂಭ್ರಮ. ಓಣಂ ಮುಗಿದರೂ ಅದರ ಸಾಮೂಹಿಕ ಆಚರಣೆಗಳು ನಿಲ್ಲುವುದೇ ಇಲ್ಲ. ವಿವಿಧ ಸಂಘ ಸಂಸ್ಥೆಗಳು ತಮ್ಮ ವತಿಯಿಂದ ಸಾಮೂಹಿಕ ಓಣಂ ಆಚರಿಸುವುದು ರೂಢಿ. ಇದರಲ್ಲಿ ಸದಾ ಒತ್ತಡಗಳ ಬ್ಯುಸಿ ಕಾಯಕದಲ್ಲಿರುವ ವೈದ್ಯರೂ ಹೊರತಲ್ಲ. ಕಾಸರಗೋಡಿನ ಐಎಂಎ ಘಟಕದ ವತಿಯಿಂದ ನಡೆದ ಓಣಂ ಆಚರಣೆಯಲ್ಲಿ ಅವರು ಹಾಡಿ, ಕುಣಿದು, ಉಂಡು ನಲಿದು ಸಂಭ್ರಮಾಚರಿಸಿಕೊಂಡರು.
ಕಾಸರಗೋಡು ಐಎಂಎ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಐಎಂಎ ಜಿಲ್ಲಾ ಸಂಚಾಲಕ ಡಾ. ಬಿ. ನಾರಾಯಣ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಐಎಂಎ ಕಾಸರಗೋಡು ನಗರ ಘಟಕದ ಅಧ್ಯಕ್ಷ ಡಾ. ಜಿತೇಂದ್ರ ರೈ, ಕಾರ್ಯದರ್ಶಿ ಡಾ. ಪ್ರಜ್ಯೋತ್ ಶೆಟ್ಟಿ, ಖಜಾಂಜಿ ಡಾ.ಖಾಸಿಂ, IWMA
ಅಧ್ಯಕ್ಷೆ ಡಾ. ಮಾಯಾ ಮಲ್ಯ, ಡಾ. ಜಯಲಕ್ಷ್ಮೀ ಸೂರಜ್, ಡಾ. ಜ್ಯೋತಿ ಎಸ್ ಮೊದಲಾದವರು ಪಾಲ್ಗೊಂಡರು.
ಕೇರಳೀಯ ಉಡುಪು ಮತ್ತು ಕೇರಳೀಯ ಮನಸುಗಳೊಂದಿಗೆ ಸಂಭ್ರಮಿಸಿದ ಮಹಿಳಾ ವೈದ್ಯರು ಮನೋಜ್ಞವಾಗಿ ತಿರುವಾದಿರ ಕಳಿ ನಡೆಸಿದರು. ಬಳಿಕ ಐಎಂಎ ಕಾಸರಗೋಡು ಕರೋಕೆ ಸಂಘದ ಕರೋಕೆ ನೈಟ್ ನಡೆಯಿತು. ಬಳಿಕ ಕೇರಳೀಯ ಸಾಂಪ್ರದಾಯಿಕ ಓಣಂ ಸದ್ಯ ಉಣ್ಣಲಾಯಿತು.