ಪೆರ್ಲ ಮರಾಟಿ ಬೋರ್ಡಿಂಗ್ ಹಾಲ್ ನಲ್ಲಿ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ, ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ, ಮರಾಟಿ ಮಹಿಳಾ ವೇದಿಕೆಯ ಸಹಯೋಗದಲ್ಲಿ “ಮರಾಟಿ ಡೇ” ಆಚರಿಸಲಾಯಿತು. ಮರಾಟಿ ಸಂರಕ್ಷಣಾ ಸಮಿತಿ ಸ್ಥಾಪಕ ಕಾರ್ಯದರ್ಶಿ ಡಾ. ಬಿ. ನಾರಾಯಣ ನಾಯ್ಕ್, (ಮ್ಯಾನೇಜಿಂಗ್ ಟ್ರಸ್ಟಿ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್) ಮರಾಟಿ ಡೇ ಯಂಗವಾಗಿ ಧ್ವಜ ಹಾರಿಸಿ ಮರಾಟಿ ಡೇಗೆ ಚಾಲನೆ ಇತ್ತರು.
ಈ ಸಂದರ್ಭ ಮಾತನಾಡಿದ ಅವರು ಮರಾಟಿ ಮರುಮೀಸಲಾತಿಗಾಗಿ 2001 ರಿಂದ ನಡೆದ ಹೋರಾಟದ ಸಂಕ್ಷಿಪ್ತ ವಿವರಣೆಯನ್ನು ಇತ್ತರು . ಬಾಲಕೃಷ್ಣ ಮಾಸ್ಟರ್ ಕಯ್ಯರ್, ಡಾ ಬಿ ಜಿ ನಾಯ್ಕ್ ಹಾಗೂ ಡಾ ಬಿ ನಾರಾಯಣ ನಾಯ್ಕ್ ರವರು ಸಮಾಜ ಬಾಂದವರನ್ನು ಒಗ್ಗೂಡಿಸಿ ಸತತವಾಗಿ 13 ವರ್ಷಗಳ ಹೋರಾಟದ ಫಲವಾಗಿ ಸಿಕ್ಕಿದ ಮರು ಮೀಸಲಾತಿಯನ್ನು ಸರಿಯಾಗಿ ಉಪಯೋಗಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಶ್ರಮವಹಿಸಬೇಕೆಂದು ಕರೆ ಕೊಟ್ಟರು. ಡಾ. ಬಿ ಜಿ ನಾಯ್ಕ್ ಅಧ್ಯಕ್ಷತೆ ವಹಿಸಿದರು
ಡಾ ಶಿವ ನಾಯ್ಕ್, ಸಿ ಎಚ್ ಗೋವಿಂದ ನಾಯ್ಕ್, ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜ, ಶಶಿಕಲಾ, ಪೂರ್ಣಿಮಾ ಪುರಂದರ, ಪುರಂದರ ಮಾಸ್ಟರ್ ಪೆರ್ಲ, ಕೃಷ್ಣ ನಾಯ್ಕ್ ಕೂಡ್ಲು, ಶೀನ ನಾಯ್ಕ್, ಐತಪ್ಪ ನಾಯ್ಕ್, ಬಾಲಕೃಷ್ಣ ನಾಯ್ಕ್ ನಲ್ಕ, ಭವಾನಿ ಏಳ್ಕಾನ, ನಾರಾಯಣ ನಾಯ್ಕ್ ಕಯ್ಯರ್ ಮೊದಲಾದ ನೇತಾರರು ಭಾಗವಹಿಸಿದರು. ಡಾ. ಬಿ ಜಿ ನಾಯ್ಕ್ ರವರು ಮರಾಟಿ ಸಮಾಜದ ಏಳಿಗೆಗಾಗಿ ನಡೆಸಿದ ಹೋರಾಟವನ್ನು ಗುರುತಿಸಿ ಈ ಸಂದರ್ಭದಲ್ಲಿ ಶಾಲು ಹೊದಿಸಿ, ಹಣ್ಣು ಹಂಪಲನ್ನಿತ್ತು ಸನ್ಮಾನಿಸಲಾಯಿತು