ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯ ತಜ್ಞ ರಾಗಿರುವ ಡಾ.ಜನಾರ್ದನ ನಾಯ್ಕ್ ಸಿ ಎಚ್ ರವರು ಮಂಗಳೂರಿನ ಯೇನೆಪೋಯ ವೈದ್ಯಕೀಯ ಕಾಲೇಜಿನಿಂದ “ಸಂಗೀತ ಚಿಕಿತ್ಸೆ” ಯಲ್ಲಿ ಸರ್ಟಿಫಿಕೇಟಿಗೆ ಅರ್ಹರಾದರು. ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಮಾರಂಭ ದಲ್ಲಿ, ಜರ್ಮನಿಯ ಡಾ. ಕೋರ್ಡುಲಾ ಡಯಟ್ರಿಚ್ ಅವರ ಸಮ್ಮುಖದಲ್ಲಿ, ಯೇನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಫ್ರೊ. ರಘುವೀರ ರಿಂದ ಪ್ರಮಾಣ ಪತ್ರ ವನ್ನು ಪಡೆದುಕೊಂಡರು.
ಸಂಗೀತ ಚಿಕಿತ್ಸಾತ್ಮಕ ಪದ್ಧತಿಯ ನಿರ್ದೇಶಕರು ಫ್ರೊ. ವಿಜಯಲಕ್ಷ್ಮಿ , ಪ್ರೊ. ಪ್ರಭಾ ಅಧಿಕಾರಿ ಮತ್ತು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಡಾ.ಜನಾರ್ದನ ರವರು ಉತ್ತರ ಕೇರಳದಲ್ಲಿ, ಸಂಗೀತ ಚಿಕಿತ್ಸಾ ರಂಗದಲ್ಲಿ ಪ್ರಮಾಣ ಪತ್ರ ಪಡೆದ ಪ್ರಥಮ ವೈದ್ಯ ರಾಗಿದ್ದಾರೆ.
ಸಂಗೀತ ಚಿಕಿತ್ಸೆಯೆಂದರೆ ವ್ಯಕ್ತಿಯ ಮಾನಸಿಕ ಆರೋಗ್ಯದ ಅಗತ್ಯ ಅನುಸಾರ ಸಂಗೀತವನ್ನು ಬಳಸಿಕೊಳ್ಳಲು ನಿರ್ದೇಶಿಸುವ ಚಿಕಿತ್ಸಾ ಕ್ರಮವಾಗಿದೆ. ರೋಗಿಯ ಮಾನಸಿಕ ಸಮಸ್ಯೆ, ಒತ್ತಡ, ನಿದ್ರಾವಿಹೀನತೆಯ ಬಳಲುವಿಕೆ ಮತ್ತು ಅದರಿಂದುಂಟಾಗುವ ಪರಿಣಾಮಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಸಂಗೀತ ಚಿಕಿತ್ಸೆಯು ಮಹತ್ವದ ಸ್ಥಾನ ಪಡೆದಿದೆ