ಕಣಿಪುರ ಸುದ್ದಿಜಾಲ
ಉಪ್ಪಳದ ಮನೆಯೊಂದರಲ್ಲಿ ದಾಸ್ತಾನಿರಿಸಿದ್ದ ಭಾರೀ ಪ್ರಮಾಣದ ಎಂಡಿಎಂಎ ಮತ್ತು ಗಾಂಜಾ ಸಹಿತ ಪೇಸ್ಟ್ ರೂಪದ ಅಮಲುಪದಾರ್ಥಗಳನ್ನು ಪತ್ತೆ ಹಚ್ಚಿ ವಶಪಡಿಸಲಾಗಿದ್ದು ಮನೆಯ ಮಾಲಕನನ್ನು ಬಂಧಿಸಲಾಗಿದೆ .ಆಸ್ಗರ್ ಆಲಿ ಎಂಬಾತ ಬಂಧಿತ ವ್ಯಕ್ತಿಯಾಗಿದ್ದು, ಕಾಸರಗೋಡು ಜಿಲ್ಲೆಯ ಬೃಹತ್ ಎಂಡಿಎಂಎ ಪೂರೈಕೆ ದಂಧೆಯ ಕುರಿತು ಪೋಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಉಪ್ಪಳ ಪತ್ವಾಡಿಯ ಮನೆಗೆ ಸುಸಜ್ಜಿತವಾಗಿ ಧಾಳಿ ನಡೆಸಿದ ಪೋಲೀಸರು, ಮನೆಯ ಯಜಮಾನನನ್ನು ವಿಚಾರಣೆಗೊಳಪಡಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಳಗೆ ರಹಸ್ಯವಾಗಿ ಅಡಗಿಸಿಟ್ಟ ಭಾರೀ ಪ್ರಮಾಣದ ಮಾರಕ ಅಮಲು ವಸ್ತುಗಳನ್ನು ವಶಪಡಿಸಲಾಗಿದೆ.

3ಕಿಲೋ ಎಂಡಿಎಂಎ ಯ ಹೊರತಾಗಿ 1ಕಿಲೋ ಗಾಂಜಾ, 1ಕಿಲೋ ಅಮಲಿನ ಮಾತ್ರೆ ಮತ್ತು ಪೇಸ್ಟ್ ರೂಪದ ವಸ್ತುಗಳನ್ನು ಇಲ್ಲಿಂದ ಪತ್ತೆಹಚ್ಚಲಾಗಿದ್ದು, ಮನೆ ಕೇಂದ್ರೀಕರಿಸಿ ಬೃಹತ್ ಮಾರಾಟ, ಪೂರೈಕೆ ದಂಧೆ ನಡೆಯುತ್ತಿತ್ತೆಂದು ಪೋಲೀಸರು ತಿಳಿಸಿದ್ದಾರೆ.