20
ಮಂಜೇಶ್ವರ: ಕಿಂಗ್ ಮಾಸ್ಟರ್ ಕಾಸರಗೋಡು’ ಇದರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಆಲ್ ಎಂಪ್ಲಾಯೀಸ್ ಕ್ರಿಕೆಟ್ ಟೂರ್ನಮೆಂಟ್ ಸೆಪ್ಟೆಂಬರ್ 21 ರಂದು ಮಿಯಾಪದವು ಶಾಲಾ ಮೈದಾನದಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಉದ್ಘಾಟಿಸುವರು. ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಂಗಣದ ಉದ್ಘಾಟನೆಯನ್ನು ದೈವದ ಪಾತ್ರಿ ಭರತ್ ರಾಜ್ ಅಡ್ವಕೇಟ್ ಅಟ್ಟೆಗೋಳಿ ನೆರವೇರಿಸುವರು.ಈ ಪಿ ಯಲ್ ನ ವ್ಯವಸ್ಥಾಪಕ ಉದಯ್ ಸಾರಂಗ್ ರವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ಮುಳ್ಳೆರಿಯಾ (ನಿವೃತ್ತ ಮುಖ್ಯೋಪಾಧ್ಯಾಯರು), ಇಸ್ಮಾಯಿಲ್ ಮಾಸ್ತರ್(ಮುಖ್ಯೋಪಾಧ್ಯಾಯರು),ಪ್ರದೀಪ್ ಡಿಸೋಜ ಮಿಯಪದವು, ನಯನ್ ಕುಮಾರ್ ಕುಂಟಾರ್,ಮಂಜುನಾಥ್ ಕಾರ್ಲೆ,ಪವನ್ ಕುಮಾರ್ ಹೊಸಂಗಡಿ,ರಾಜೇಶ್ ಮೊಂತೆರೊ,ಸುನಿಲ್ ಡಿ ಸೋಜ ಬಾಯಿಕಟ್ಟೆ,ಸಂಜೀವ ಮಾಸ್ತರ್,ಶ್ಯಾಮ್ ರಂಜಿತ್ ,ಮಿಥುನ್ ಮಾಸ್ತರ್, ಪ್ರಿಜ್ಜು ಬಳ್ಳಾರ್,ರಾಜೇಶ್ ಕೊಡ್ಲಮೊಗರು ಮೊದಲಾದವರು ಉಪಸ್ಥಿತರಿರುವರು.