ಕಾಞಂಗಾಡಿನ ಮಾವುಂಗಲ್ ನಲ್ಲಿ ವೈದ್ಯ ದಂಪತಿಯ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿ ಅವರ ಕಾರನ್ನು ಧ್ವಂಸಗೊಳಿಸಿರುವುದನ್ನು ಕಾಸರಗೋಡು ಐಎಂಎ ಘಟಕ ತೀವ್ರವಾಗಿ ಖಂಡಿಸಿ,ಪ್ರತಿಭಟಿಸಿದೆ.
ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ಹಿಂಸಾಚಾರ ಈಗ ಮನೆಗಳಿಗೂ ಹಬ್ಬಿದೆ. ಇದರಿಂದ ವೈದ್ಯಕೀಯ ವೃತ್ತಿಗೆ ಅಸುರಕ್ಷತೆಯ ಭಯ ಕಾಡತೊಡಗಿದೆ.
ಇಂತಹ ಪ್ರವೃತ್ತಿಗಳು ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಮೇಲೆ ದೂರಗಾಮಿ ಪರಿಣಾಮ ಬೀರಲಿದ್ದು, ಬೇರೆ ಜಿಲ್ಲೆಗಳ ವೈದ್ಯರು ಇಲ್ಲಿ ಕೆಲಸ ಮಾಡಲು ನಿರುತ್ಸಾಹಗೊಳಿಸಲಿದ್ದು, ಜಿಲ್ಲೆಯಲ್ಲಿ ವೈದ್ಯರ ಕೊರತೆ ಮತ್ತಷ್ಟು ಹೆಚ್ಚಲಿದೆ ಎಂದು ಐಎಂಎ ತಿಳಿಸಿದೆ.
ಮನೆಗೆ ಆಕ್ರಮಿಸಿದ ಅಪರಾಧಿಗಳನ್ನು ಗುರುತಿಸಿ ತಕ್ಕ ಶಿಕ್ಷೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ
ವೈದ್ಯರು ಸುರಕ್ಷಿತ ಕೆಲಸ ಮತ್ತು ಜೀವನ ಪರಿಸ್ಥಿತಿಗಳನ್ನು ಹೊಂದಿರಬೇಕೆಂದು IMA ಬಯಸುತ್ತದೆ ಎಂದು
ಡಾ. ದೀಪಿಕಾ ಕಿಶೋರ್
(ಅಧ್ಯಕ್ಷರು),ಡಾ.ನಾರಾಯಣ ನಾಯ್ಕ್(ಸಂಚಾಲಕ), ಹಾಗೂ
ಐಎಂಎ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯರಾದ
ಡಾ ಜಿತೇಂದ್ರ ರೈ,
ಡಾ ಪ್ರಜ್ಯೋತ್ ,
ಡಾ ಖಾಸಿಂ ಟಿ ಸಂಯುಕ್ತ ಹೇಳಿಕೆಯಲ್ಲಿ ಪ್ರತಿಭಟಿಸಿದ್ದಾರೆ.