21
ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಂ.ಬಿ.ಬಿ.ಎಸ್. ಓದುತ್ತಿದ್ದ ಕುಂಬಳೆ ಬಳಿಯ ವಿದ್ಯಾರ್ಥಿ ವಾಹನ ಅಫಘಾತದಲ್ಲಿ ಮೃತಪಟ್ಟ ಕುರಿತು ವರದಿಯಾಗಿದೆ. ಪುತ್ತಿಗೆ ಕಟ್ಟತ್ತಡ್ಕ ಎಕೆಜಿ ನಗರ ನಿವಾಸಿ ಎಂ.ಕೆ.ಮುಹಮ್ಮದ್ ರಾಶೀದ್ (21)ಮೃತ ವ್ಯಕ್ತಿಯಾಗಿದ್ದಾರೆ.
ಬುಧವಾರ ರಾತ್ರಿ ಕೊಯಮತ್ತೂರಿನ ಹೋಟೆಲೊಂದರ ಮುಂಭಾಗ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಹೋಟೆಲಿನಿಂದ ಆಹಾರ ಸೇವಿಸಿ, ರಸ್ತೆ ದಾಟುವಾಗ ಟಿಪ್ಪರ್ ಲಾರಿ ಬಡಿದು ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ವಿದ್ಯಾರ್ಥಿ ಕೂಡಲೇ ಮೃತರಾದರೆಂದು ತಿಳಿದುಬಂದಿದೆ.
ಕೊಯಮತ್ತೂರಿನಲ್ಲಿ ದ್ವಿತೀಯ ವರ್ಷ ಎಂಬಿಬಿಎಸ್ ಓದುತ್ತಿದ್ದ ಮುಹಮ್ಮದ್ ರಾಶೀದ್ ಕೊಲ್ಲಿ ಉದ್ಯೋಗಿ ಮೊಗ್ರಾಲ್ ಕೊಪ್ಪಳದ ಅಹ್ಮದ್ ರ ಪುತ್ರನಾಗಿದ್ದು, ಇತ್ತೀಚಿನ ವರ್ಷಗಳಿಂದ ಪುತ್ತಿಗೆಯಲ್ಲಿ ವಾಸ ಆರಂಭಿಸಿದ್ದರು. ದುರ್ಘಟನೆಯ ಮಾಹಿತಿ ಅರಿತು ಸಂಬಂಧಿಕರು ನಿನ್ನೆ ರಾತ್ರಿಯೇ ಕೊಯಮತ್ತೂರಿಗೆ ತೆರಳಿದ್ದಾರೆ.