38
ಕಾಸರಗೋಡು:(ಸೆ.19)
ಗೂಡಂಗಡಿಗೆ ಬರುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ, ಬೆದರಿಸಿ ಸತತ ಎರಡುವರ್ಷ ಲೈಂಗಿಕ ದೌರ್ಜನ್ಯ ನೀಡಿದ 60ರ ವೃದ್ಧನಿಗೆ ನ್ಯಾಯಾಲಯ 125ವರ್ಷಗಳ ಕಠಿಣ ಶಿಕ್ಷೆ ಮತ್ತು ಐದೂವರೆ ಲಕ್ಷ ರೂ ದಂಡ ವಿಧಿಸಿದೆ.
ಕಾಸರಗೋಡಿನ ಕೂಡ್ಳು ಕಾಂತಿಕೆರೆ ನಿವಾಸಿ ಸುಬ್ಬ(60) ಎಂಬಾತನಿಗೆ ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯದ ನ್ಯಾಯಾಧೀಶರು ಪೋಕ್ಸೋ ಕಾಯ್ದೆಯನ್ವಯ ಈ ಶಿಕ್ಷೆ ಪ್ರಕಟಿಸಿದ್ದಾರೆ.
ಉಳಿಯತ್ತಡ್ಕದಲ್ಲಿ ಗೂಡಂಗಡಿ ನಡೆಸುತ್ತಿದ್ದ ವ್ಯಕ್ತಿ ತನ್ನಂಗಡಿಗೆ ಬಂದ ಬಾಲಕಿಗೆ ಚಾಕಲೇಟು ನೀಡುತ್ತಾ ಸ್ನೇಹ ಬೆಳೆಸಿ ಬಳಿಕ ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದನು. ಈ ಕುರಿತು ಸುಳಿವು ದೊರೆತ ಚೈಲ್ಡ್ ಲೈನ್ ಕಾರ್ಯಕರ್ತರು ತನಿಖೆ ನಡೆಸಿ, ಪೋಲೀಸರ ಮೂಲಕ ಆರೋಪಿಯನ್ನು ಬಂಧಿಸಿದ್ದರು. 2021 ಜುಲೈ ತಿಂಗಳಲ್ಲಿ ಘಟನೆ ನಡೆದಿತ್ತು.
ಮಹಿಳಾ ಪೋಲೀಸ್ ಠಾಣಾ ಎಸ್.ಐ. ಭಾನುಮತಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ತನಿಖಾವರದಿ ಸಲ್ಲಿಸಿದ್ದರು.