ರೋಟರಿ ಓಣೋತ್ಸವಂ : ಸಾಧಕ ಶಿಕ್ಷಕರಾದ ಕೆ.ನಾರಾಯಣನ್ , ಎಂ.ಎಂ.ಮಮ್ತಾಜ್ ಅವರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ

by Narayan Chambaltimar

ಕಣಿಪುರ ಸುದ್ದಿಜಾಲ (ಸೆ.18)

ಕಾಸರಗೋಡು: ಮೂಲ ಶಿಕ್ಷಣ ಅಭಿಯಾನದ ಅಂಗವಾಗಿ ರೋಟರಿ ಇಂಟರ್‌ನ್ಯಾಶನಲ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮೆರೆದವರಿಗೆ ನೀಡುವ ಈ ಬಾರಿಯ ರಾಷ್ಟ್ರ ನಿರ್ಮಾತೃ ಪ್ರಶಸ್ತಿಯನ್ನು ಬೋವಿಕಾನಂ ಬಿಎಆರ್ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಕೆ ನಾರಾಯಣನ್ ಮತ್ತು ನಾಯಮ್ಮಾರಮೂಲೆ TIHSS ಶಾಲೆಯ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಎಂ.ಎ.ಮುಮ್ತಾಜ್ ಅವರಿಗೆ ನೀಡಿ ಗೌರವಿಸಲಾಯಿತು. ಕಾಸರಗೋಡು ರೋಟರಿ ಓಣೋತ್ಸವದಲ್ಲಿ ನಡೆದ ಪ್ರಶಸ್ತಿ ಪ್ರದಾನ ವಿಶೇಷ ಗೌರವಾದರಕ್ಕೆ ಪಾತ್ರವಾಯಿತು.

ಪಠ್ಯ ಮತ್ತು ಪಠ್ಯೇತರ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಾಧಿಸಿದ ಶ್ರೇಷ್ಠತೆಗಾಗಿ ಪ್ರಶಸ್ತಿಗಳನ್ನು ನೀಡಲಾಯಿತು.
ರಾಜ್ಯ ಗಣಿತ ಶಿಕ್ಷಕರ ಸಂಪನ್ಮೂಲ ಗುಂಪಿನ ಮಾಸ್ಟರ್ ಟ್ರೇನರ್ ಹಾಗೂ ಜಿಲ್ಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ಶಿಕ್ಷಕ ತರಬೇತುದಾರರೂ ಆಗಿರುವ ಉದುಮ ಮಾಗಡ ನಿವಾಸಿಯಾದ ಕೆ. ನಾರಾಯಣ್ ಅಧ್ಯಾಪನ ವಲಯದ ಬಹುಮುಖಪ್ರತಿಭೆ.

ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡ ಎಂ.ಎ. ಮುಮ್ತಾಜ್ ಕೂಡ ಸಾಮಾಜಿಕ ಕಾರ್ಯಕರ್ತೆ.

ಅವರು ಕವಯಿತ್ರಿ ಯಾಗಿ ಕವನ ಸಂಕಲನ ಮತ್ತು ಪ್ರವಾಸ ಕಥನ ಸೇರಿದಂತೆ ನಾಲ್ಕು ಕೃತಿಗಳ ಲೇಖಕಿಯೂ ಹೌದು.
ಕಾಸರಗೋಡು ರೋಟರಿಯ ಕುಟುಂಬ ಸಮ್ಮಿಲನ ಹಾಗೂ ಓಣೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಮನೋರಂಜನೆಯಂಗವಾಗಿ ಮಹಿಳಾ ವೇದಿಕೆಯ ನೇತೃತ್ವದಲ್ಲಿ ತಿರುವಾದಿರಕಳಿ, ಸಂಗೀತ ಕಾರ್ಯಕ್ರಮ ಹಾಗೂ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆದವು.

ರೋಟರಿ ಅಧ್ಯಕ್ಷ ಡಾ. ಬಿ.ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಪ್ರೆಟ್ಟಿ ವುಮನ್ ಬ್ಯೂಟಿ ಪಾರ್ಲರ್‌ನ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಪಿಳ್ಳೈ ಮುಖ್ಯ ಅತಿಥಿಯಾಗಿದ್ದರು.
ರಾಷ್ಟ್ರ ನಿರ್ಮಾಣ ಪ್ರಶಸ್ತಿ ಸಮಿತಿ ಅಧ್ಯಕ್ಷ ಎ.ಸಿ.ಜೋಶಿ, ಡಾ. ಎಂ.ಎಸ್.ಶ್ರೀಧರ ರಾವ್, ರೋಟರಿ ಮಹಿಳಾ ವೇದಿಕೆ ಕಾರ್ಯದರ್ಶಿ ಅಶ್ವಿನಿ ವರದರಾಜ್, ಎಂ.ಟಿ.ದಿನೇಶ್, ಪಿ.ವಿ.ಗೋಕುಲ್ ಚಂದ್ರಬಾಬು, ಪ್ರಥಮ ಮಹಿಳೆ ಡಾ ಜ್ಯೋತಿ ಎಸ್ ಮಾತನಾಡಿದರು. ಸಾವಯವ ಕೃಷಿ ಪ್ರಶಸ್ತಿ ಪಡೆದ ಡಾ. ಯು. ಎಸ್ ಭಟ್ ರನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಹರಿಕೃಷ್ಣ ನಂಬಿಯಾರ್ ಸನ್ಮಾನಿಸಿದರು. ರೋಟರಿ ಮಹಿಳಾ ವೇದಿಕೆ ಅಧ್ಯಕ್ಷೆ ಸಿ.ಬಿಂದು ಸ್ವಾಗತಿಸಿ, ಕ್ಲಬ್ ಕಾರ್ಯದರ್ಶಿ ಕೆ. ಹರಿಪ್ರಸಾದ್ ಧನ್ಯವಾದವಿತ್ತರು.

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00