ಉಪ್ಪಿನಂಗಡಿಯಲ್ಲಿ ನಾಲ್ವರಿಗೆ ಸ್ಮೃತಿಗೌರವ ಸಹಿತ ತಾಳಮದ್ದಳೆ, ಸಂಸ್ಮರಣೆ

by Narayan Chambaltimar

 

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ ಕಾರ್ಯಕ್ರಮವು ಸಂಸ್ಮರಣೆ, ಸ್ಮೃತಿ ಗೌರವದೊಂದಿಗೆ ಪೆರಿಯಡ್ಕದ ಮಧುವನದಲ್ಲಿ ಜರಗಿತು.

ನಿವೃತ್ತ ಉಪನ್ಯಾಸಕ, ಕಲಾವಿದ ಕೆ. ಮಹಾಲಿಂಗೇಶ್ವರ ಭಟ್ಟರ ತೀರ್ಥರೂಪ ದಿ. ತಿರುಮಲೇಶ್ವರ ಭಟ್ ಕಟ್ಟದಮೂಲೆ ಇವರ ಸಂಸ್ಮರಣೆಯನ್ನು ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಮಾಡಿ ಅವರ ಕೊಡುಗೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ
ಪ್ರೊ. ವಿ. ಬಿ ಅರ್ತಿಕಜೆ ಪುತ್ತೂರು, ನೀ.ಸು.ಮಧ್ಯಸ್ಥ,
ಭಾಗವತ, ಗುರು ಗೋವಿಂದ ನಾಯಕ್ ಪಾಲೆಚ್ಚಾರು, ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ.ಆಚಾರ್ಯ ಅಲಂಕಾರು ಇವರಿಗೆ ಸ್ಮೃತಿ ಗೌರವ ಪ್ರದಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾವಿದ ಮಹಾಲಿಂಗೇಶ್ವರ ಭಟ್ ಇವರನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹರೀಶ್ ಆಚಾರ್ಯ ಬಾರ್ಯ ಸನ್ಮಾನ ಪತ್ರ ವಾಚಿಸಿದರು.

ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ವಸಂತಕುಮಾರ ತಾಳ್ತಜೆ,ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮೇಶ ಶೆಣೈ ರಾಮನಗರ, ಶ್ರೀಧರ ಭಟ್ ಕೆ, ಸಾವಿತ್ರಿಬಾಯಿ, ಶೋಭಾ ಬಿ ಆನಂದ್, ಹರಿಕಿರಣ್ ಕೊಯ್ಲ, ಬಿ. ಸುಬ್ರಮಣ್ಯ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ವೈಶಾಲಿ ಕಾರ್ಯಕ್ರಮ ನಿರೂಪಿಸಿ ದುರ್ಗಾಮಣಿ ವಂದಿಸಿದರು.

ಬಳಿಕ ಮಹಾಭಾರತ ಸರಣಿಯ 47ನೇ ಕಾರ್ಯಕ್ರಮವಾಗಿ ಪಾರ್ಥಸಾರಥ್ಯ ಮತ್ತು ಭಕ್ತ ಸುಧನ್ವ ತಾಳಮದ್ದಳೆಯು ಪೆರಿಯಡ್ಕ ಸಾಂಸ್ಕೃತಿಕ ಕಲಾವೇದಿಕೆಯ ಸಹಯೋಗದಲ್ಲಿ ಜರಗಿತು.
ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ(ಶ್ರೀಕೃಷ್ಣ 1)
ಶ್ರೀಧರ ಎಸ್.ಪಿ ಸುರತ್ಕಲ್ (ಶ್ರೀಕೃಷ್ಣ2)
ಸಂಜೀವ ಪಾರೆಂಕಿ(ಅರ್ಜುನ)
ಗುಡ್ಡಪ್ಪ ಬಲ್ಯ(ಕೌರವ1)
ಮಹಾಲಿಂಗೇಶ್ವರ ಭಟ್-(ಕೌರವ2) ಗೀತಾಕುದ್ದಣ್ಣಾಯ(ಬಲರಾಮ)
ಗಣರಾಜ ಕುಂಬ್ಳೆ(ಸುಧನ್ವ1),
ದಿವಾಕರ ಆಚಾರ್ಯ ಹಳೆನೇರೆಂಕಿ(ಸುಧನ್ವ2)
ಅಂಬಾ ಪ್ರಸಾದ ಪಾತಾಳ(ಪ್ರಭಾವತಿ),
ಜಯರಾಮ ನಾಲ್ಗುತ್ತು(ಶ್ರೀಕೃಷ್ಣ)
ಹರೀಶ್ ಬಾರ್ಯ(ಅರ್ಜುನ)
ನಾರಾಯಣಭಟ್ ಅಲಂಕಾರು(ಹಂಸಧ್ವಜ)ಬಾಲಕೃಷ್ಣಕೇಪುಳು(ಶಂಖ-ಲಿಖಿತ ) ಶ್ರುತಿ ವಿಸ್ಮಿತ್(ವೃಷಕೇತು) ಹಾಗೂ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು,ಪದ್ಮನಾಭ ಕುಲಾಲ್ ಇಳಂತಿಲ,ನಿತೀಶ್ ಕುಮಾರ್. ವೈ ,ಸುರೇಶ್ ರಾವ್ ಬನ್ನೆಂಗಳ ಹಿಮ್ಮೇಳದಲ್ಲಿ
ಮುರಳೀಧರ ಕಲ್ಲೂರಾಯ, ಗಣೇಶ್ ಭಟ್ ಬೆಳಾಲು,
ಮೋಹನ ಕುಮಾರ್ ಶರವೂರು,
ಶ್ರೀಪತಿ ಭಟ್ ಉಪ್ಪಿನಂಗಡಿ ,ಪ್ರಚೇತ್ಆಳ್ವ ಬಾರ್ಯ,ಶ್ರೀಹರಿ ನಗ್ರಿ ಭಾಗವಹಿಸಿದ್ದರು. ಕಲಾವಿದರೆಲ್ಲರನ್ನು ಸಂಘಟಕ ಕೆ.ಮಹಾಲಿಂಗೇಶ್ವರ ಭಟ್ ಸ್ಮರಣಿಕೆ ನೀಡಿ ಗೌರವಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00