ಮಂಗಳೂರು ದಸರಾದಲ್ಲಿ ಈಬಾರಿ ಗುಲ್ಲೆಬ್ಬಿಸುವ ಡಿಜೆ, ನಾಸಿಕ್ ಗೆ ಅವಕಾಶ ಇಲ್ಲ

by Narayan Chambaltimar

ಕಣಿಪುರ ಸುದ್ದಿಜಾಲ

ಪ್ರತಿಷ್ಠಿತ ಮಂಗಳೂರು ದಸರಾದಲ್ಲಿ ಈ ಬಾರಿ ಡಿಜೆ ಅಬ್ಬರ ಮತ್ತು ನಾಸಿಕ್ ಬ್ಯಾಂಡ್ ಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ಅ.3ರಂದುಲ ಆರಂಭಗೊಂಡು 14ರ ತನಕ ನಡೆಯಲಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವೈಭವದ ದಸರಾವನ್ನು ನೆಲಮೂಲ ಸಂಸ್ಕೃತಿಗೆ ಒತ್ತು ನೀಡಿಲ ಆಚರಿಸಲು ಕ್ಷೇತ್ರ ಸಮಿತಿ ತೀರ್ಮಾನಿಸಿದೆ

ಕರಾವಳಿಯ ಸಾಂಸ್ಕೃತಿಕ ಪರಂಪರೆಗಷ್ಟೇ ಅವಕಾಶ ಅಲ್ಲದೇ ಪರಂಪರೆಗೆ ಧಕ್ಕೆ ತರುವಂತಹ ಯಾವುದೇ ಟ್ಯಾಬ್ಲೋ, ಅತಿರೇಕಗಳ ಡಿಜೆ ಪ್ರದರ್ಶಿಸುವಂತಿಲ್ಲ. ಟ್ಯಾಬ್ಲೋದಲ್ಲಿ ಭಾಗವಹಿಸಲಿಚ್ಛಿಸುವವರು ಮುಂಚಿತವಾಗಿ ತಮ್ಮ ಸ್ಕ್ರಿಪ್ಟ್ ಸಹಿತ ಸಮಿತಿಗೆ ವಿನಂತಿ ಪತ್ರ ಸಲ್ಲಿಸಿ ಅಧಿಕೃತ ಅನುಮತಿ ಪಡೆಯಬೇಕೆಂದು ಸಮಿತಿ ಕೋಶಾಧಿಕಾರಿ ಆರ್. ಪದ್ಮರಾಜ್ ತಿಳಿಸಿದ್ದಾರೆ.

ಮಂಗಳೂರು ದಸರಾ ಉತ್ಸವವು 11ದಿನಗಳ ಮಹೋತ್ಸವವಾಗಿದ್ದು, ಇದು ಮಂಗಳೂರಿಗೆ ಕೀರ್ತಿ ಮತ್ತು ಸಾಂಸ್ಕೃತಿಕ ಶೋಭೆ ತಂದಿದೆ. ಅದರ ಘನತೆಯನ್ನು ಉಳಿಸಿಕೊಂಡು ಶಾಂತಿ,ಸಾಮರಸ್ಯದಿಂದ ಅಚ್ಚುಕಟ್ಟಾಗಿ ಉತ್ಸವ ನಡೆಸಲಾಗುವುದೆಂದು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.
ಮಂಗಳೂರು ದಸರಾ ಶ್ರೀನಾರಾಯಣ ಗುರುಗಳ ತತ್ವದ ಸಾಕ್ಷಾತ್ಕಾರವಾಗಿದೆ. ಜನರಿಂದಲೇ ಆಚರಿಸಲ್ಪಡುವ ದಸರಾ ಉತ್ಸವಕ್ಕೆ ದೇಶದ ನಾನಾ ಭಾಗದಿಂದ ಜನರಾಗಮಿಸುತ್ತಾರೆ. ಅವರಿಗೆ ಸುವ್ಯವಸ್ಥೆ ಒದಗಿಸಿ ನಾವು ಅತಿಥೇಯ ಸಂಸ್ಕಾರ ಮೆರೆಯೋಣ ಎಂದು ಕ್ಷೇತ್ರದ ಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಮಂಗಳೂರು ದಸರಾ ಜನಪ್ರಿಯವಾಗುತ್ತಿದೆ. ಇತ್ತೀಚಿನ ಸಾಮಾಜಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದಸರಾ ಆಚರಣೆಯ ಸುವ್ಯವಸ್ಥೆಗೆ ವಿಶೇಷ ಸಮಿತಿ ರಚಿಸಿ ಕಾಳಜಿವಹಿಸಲಾಗಿದೆ.
ದಸರಾ ಯಶಸ್ವಿಗಾಗಿ ಪೂರ್ವಭಾವಿ ಸಮಿತಿಗಳನ್ನು ರೂಪಿಸಲಾಗಿದೆ. 11ದಿನಗಳ ಉತ್ಸವಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಮುನ್ನಚ್ಚರಿಕೆಯಿಂದ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00