ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮತ್ತೆ ನಿಫಾ ವೈರಸ್ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವನ ಮರಣ ನಿಫಾ ಸೋಂಕಿಂದ ಸಂಭವಿಸಿದೆಯೆಂಬ ಪ್ರಾಥಮಿಕ ಪರಿಶೋಧನಾ ವರದಿಯಂತೆ ಆತಂಕ ಉಂಟಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮತ್ತೆ ನಿಫಾ ವೈರಸ್ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವನ ಮರಣ ನಿಫಾ ಸೋಂಕಿಂದ ಸಂಭವಿಸಿದೆಯೆಂಬ ಪ್ರಾಥಮಿಕ ಪರಿಶೋಧನಾ ವರದಿಯಂತೆ ಆತಂಕ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆ ವೈರಾಲಜಿ ಇನಿಸ್ಟಿಟ್ಯೂಟ್ ಗೆ ಕಳುಹಿಸಲಾಗಿದೆ. ಈ ಪರೀಕ್ಷಾ ಫಲಿತಾಂಶ ಬಂದ ಬಳಿಕವಷ್ಟೇ ನಿಫಾ ಕುರಿತು ಅಂತಿಮ ನಿರ್ಧಾರ ತಳೆಯಬಹುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಫಾ ಶಂಕೆಯಿಂದಾಗಿ ಮೃತ ವ್ಯಕ್ತಿಯ ಜತೆ ಸಂಪರ್ಕ ಹೊಂದಿದ 26ಮಂದಿಗಳನ್ನು ಪ್ರತ್ಯೇಕ ಗುರುತಿಸಲಾಗಿದ್ದು, ಅವರ ಕುರಿತು ಪ್ರತ್ಯೇಕ ನಿಗಾ ಇರಿಸಲಾಗಿದೆ.
ಮಲಪ್ಪುರಂ ಜಿಲ್ಲೆಯಲ್ಲಿ ಆರೋಗ್ಯ ಅಧಿಕಾರಿಗಳು ತುರ್ತು ಸಭೆ ಸೇರಿ ಮುನ್ನೆಚ್ಚರಿಕಾ ಕ್ರಮದಂಗವಾಗಿ ಕಟ್ಟೆಚ್ಚರ ವಹಿಸಿದ್ದಾರೆ.
ಬೆಂಗಳೂರಲ್ಲಿ ಕೆಲಸದಲ್ಲಿದ್ದ ಮಲಪ್ಪುರಂ ಜಿಲ್ಲೆಯ ವ್ಯಕ್ತಿ ಮೊನ್ನೆಯಷ್ಟೇ ಊರಿಗೆ ಮರಳಿದ್ದನು. ಬಂದ ಬೆನ್ನಲ್ಲೇ ಜ್ವರದಿಂದ ಬಳಲಿದ್ದನು. ಈತನಲ್ಲಿ ವಾಂತಿ ಮತ್ತು ಎನ್ಸೆಫಲಿಟಿಸ್ ಲಕ್ಷಣ ಕಂಡುಬಂದಿತ್ತು. ಎರಡು ತಿಂಗಳ ಹಿಂದೆ ಪಾಲಕ್ಕಾಡಿನಲ್ಲೂ ನಿಫಾ ವೈರಸ್ ಪತ್ತೆಯಾಗಿತ್ತು.