ಬೆಂಗಳೂರು(ಸೆ.14)
ನಂದಿನಿ ಹಾಲಿನ ದರ ಲೀಟರಿಗೆ ಮತ್ತೆ 5ರೂ ಏರಿಕೆಯಾಗುವ ಪ್ರಸ್ತಾಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಂದಿಟ್ಟಿದ್ದಾರೆ. ಸಚಿವ, ಶಾಸಕರುಗಳ ಮನವಿಯಂತೆ ದರ ಹೆಚ್ಚಳ ಮಾಡಿ, ಆ ಹಣವನ್ನು ರೈತರಿಗೆ ನೀಡುವ ನಿರ್ಧಾರ ಪ್ರಕಟಿಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರಂತೆ ಮತ್ತೊಮ್ಮೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆ ಖಚಿತವಾಗಿದೆ.
ಪ್ರತಿ ಲೀಟರ್ ಹಾಲಿಗೆ 5ರೂ ಹೆಚ್ಚಳ ಮಾಡಿ , ಆ ಹಣವನ್ನು ಹೈನುಗಾರರಿಗೆ ನೀಡಬೇಕೆಂದು ಸಹಕಾರಿ ಸಚಿವರು ಮುಖ್ಯಮಂತ್ರಿಗಳ ಸಮ್ಮುಖ ಹೇಳಿಕೆ ನೀಡಿದ್ದರು. ಈ ಕುರಿತು ಕೆಎಂಎಫ್ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ .ರಾಜ್ಯ ಸರಕಾರದ ಹಾಲಿನ ದರ ಏರಿಕೆ ಪರಾಮರ್ಶೆಯನ್ನು ಬಿಜೆಪಿ ಟೀಕಿಸಿ ವಿರೋಧಿಸಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು ಈ ಕುರಿತು ಜಾಲತಾಣ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ ಅಧಿಕಾರಕ್ಕೆ ಬಂದ 15ತಿಂಗಳಲ್ಲಿ 2ಬಾರಿ 5ರೂ ಹೆಚ್ಚಿಸಿದ ಸರಕಾರ ಈಗ ಏಕಾಏಕಿ ರೈತರ ನೆಪದಲ್ಲಿ 5ರೂ ಹೆಚ್ಚಿಸಹೊರಟಿದೆ. ರಾಜ್ಯದ ಜನರಿಂದ ಇದ್ದಷ್ಟನ್ನೂ ಬಾಚಿ ಲೂಟಿ ಹೊಡೆಯಲು ಸರಕಾರ ಮುಂದಾಗಿದೆ. ಈ ಲೂಟಿಕೋರ ಸರಕಾರ ಇರೋ ತನಕ ಕನ್ನಡ ನಾಡಿಗೆ ನೆಮ್ಮದಿ ಇಲ್ಲ ಎಂದು ಆರ್ ಅಶೋಕ್ ಉಲ್ಲೇಖಿಸಿದ್ದಾರೆ.
ಪ್ರಸ್ತುತ ಲೀ.ಗೆ 5ರೂ ಏರಿಕೆಯಾದರೆ ಕಳೆದ 15ತಿಂಗಳ ಅವಧಿಯಲ್ಲಿ 10ರೂ ಏರಿಕೆಯಾದಂತಾಗುತ್ತದೆ. ಇದಕ್ಕೆ ಸಾರ್ವಜನಿಕ ವಲಯದಿಂದಲೂ ವಿರೋಧ ಪ್ರಕಟವಾಗಿದೆ