ಕಣಿಪುರ ಸುದ್ದಿಜಾಲ
ಗುರುವಾಯೂರು (ಸೆ.14)
ಈ ಬಾರಿಯ ಓಣಂ ಸಂದರ್ಭದಲ್ಲಿ ಕೃಷ್ಣಭಕ್ತರೆಲ್ಲ ಕಣ್ಣರಳಿಸಿ ಓದುವಂತಹ, ಕೌತುಕದಿಂದ ಕೇಳುವಂತಹ ಲಕ್ಷ್ಮೀ ಕೃಪಾಕಟಾಕ್ಷದ ಸುದ್ದಿಯೊಂದು ಕೇರಳದಿಂದ ವರದಿಯಾಗಿದೆ. ಅಂದ್ರೆ ಪವಿತ್ರವಾದ ಸಿಂಹಮಾಸದ ಮೊದಲಾರ್ಧದಲ್ಲೇ ಕೇರಳದ ಜನಪ್ರಿಯ, ವಿಖ್ಯಾತ ಶ್ರೀಗುರುವಾಯೂರು ದೇವಾಲಯದ ಹುಂಡಿಗೆ ಸುಮಾರು ಆರು ಕೋಟಿಯಷ್ಟು ಕಾಣಿಕೆ ಹರಿದು ಬಂದಿದೆ!
ಇದು ಗುರುವಾಯೂರು ದೇಗುಲದಿಂದ ದೊರೆತ ದಾಖಲೆಯ ಆದಾಯ ಗಳಿಕೆಯಾಗಿದೆ.ಈ ಬಾರಿಯ ಓಣಂ ಸಂದರ್ಭದಲ್ಲಿ ಕೃಷ್ಣಭಕ್ತರೆಲ್ಲ ಕಣ್ಣರಳಿಸಿ ಓದುವಂತಹ, ಕೌತುಕದಿಂದ ಕೇಳುವಂತಹ ಲಕ್ಷ್ಮೀ ಕೃಪಾಕಟಾಕ್ಷದ ಸುದ್ದಿಯೊಂದು ಕೇರಳದಿಂದ ವರದಿಯಾಗಿದೆ. ಅಂದ್ರೆ ಪವಿತ್ರವಾದ ಸಿಂಹಮಾಸದ ಮೊದಲಾರ್ಧದಲ್ಲೇ ಕೇರಳದ ಜನಪ್ರಿಯ, ವಿಖ್ಯಾತ ಶ್ರೀಗುರುವಾಯೂರು ದೇವಾಲಯದ ಹುಂಡಿಗೆ ಸುಮಾರು ಆರು ಕೋಟಿಯಷ್ಟು ಕಾಣಿಕೆ ಹರಿದು ಬಂದಿದೆ!
ಇದು ಗುರುವಾಯೂರು ದೇಗುಲದಿಂದ ದೊರೆತ ದಾಖಲೆಯ ಆದಾಯ ಗಳಿಕೆಯಾಗಿದೆ.
ಸೆ. 13ರಂದು ಶ್ರೀ ಗುರುವಾಯೂರು ದೇಗುಲದ ಭಂಡಾರ ಕಾಣಿಕೆಗಳನ್ನು ದೇವಸ್ವಂ ಮಂಡಳಿ ಅಧಿಕಾರಿಗಳ ಸಮ್ಮುಖ ಎಣಿಸಲಾಗಿದೆ. ಈ ಸಂದರ್ಭ ದೇಗುಲದ ಚತುರ್ಮುಖ ಕವಾಟದ ಕಾಣಿಕೆ ಹುಂಡಿಗಳಿಂದಾಗಿ ಒಟ್ಟು 5,80,811,109ರೂ ಕಾಣಿಕೆಯಾಗಿ ದೊರೆತಿದೆ.ಇದರ ಜೊತೆ ಎರಡೂವರೆ ಕಿಲೋ ಚಿನ್ನ(2.620ಗ್ರಾಂ), ಹದಿನ9ಳೂವರೆ ಕಿಲೋ ಬೆಳ್ಳಿ(17.700) ದೊರೆತಿದೆ. ಇವುಗಳ ಜತೆಯಲ್ಲೇ ಕೇಂದ್ರ ಸರಕಾರ ಹಿಂಪಡೆದ ನೂತನ 2ಸಾವಿರದ 29 ಕರೆನ್ಸಿ, ನಿಷೇಧಿಸಲಾದ 1ಸಾವಿರದ 13 ನೋಟುಗಳು, 500ರ ಹಳೆಯ 114 ನೋಟುಗಳು ಕಾಣಿಕೆಯಾಗಿ ಸಿಕ್ಕಿವೆ. ಕೇವಲ 12 ದಿನಗಳ ಅಂತರದಲ್ಲಿ ಗುರುವಾಯೂರು ದೇಗುಲದಿಂದ ಇಷ್ಟೊಂದು ಪ್ರಮಾಣದ ಸಂಪತ್ತು ಕಾಣಿಕೆಯಾಗಿ ದೊರೆತದ್ದು ಇದೇ ಮೊದಲು. ಇದು ಭಕ್ತರ ಕೌತುಕದ ಕಣ್ಣರಳಿಸಿವೆ. ಇದರ ಜೊತೆ ಎರಡೂವರೆ ಕಿಲೋ ಚಿನ್ನ(2.620ಗ್ರಾಂ), ಹದಿನ9ಳೂವರೆ ಕಿಲೋ ಬೆಳ್ಳಿ(17.700) ದೊರೆತಿದೆ. ಇವುಗಳ ಜತೆಯಲ್ಲೇ ಕೇಂದ್ರ ಸರಕಾರ ಹಿಂಪಡೆದ ನೂತನ 2ಸಾವಿರದ 29 ಕರೆನ್ಸಿ, ನಿಷೇಧಿಸಲಾದ 1ಸಾವಿರದ 13 ನೋಟುಗಳು, 500ರ ಹಳೆಯ 114 ನೋಟುಗಳು ಕಾಣಿಕೆಯಾಗಿ ಸಿಕ್ಕಿವೆ. ಕೇವಲ 12 ದಿನಗಳ ಅಂತರದಲ್ಲಿ ಗುರುವಾಯೂರು ದೇಗುಲದಿಂದ ಇಷ್ಟೊಂದು ಪ್ರಮಾಣದ ಸಂಪತ್ತು ಕಾಣಿಕೆಯಾಗಿ ದೊರೆತದ್ದು ಇದೇ ಮೊದಲು. ಇದು ಭಕ್ತರ ಕೌತುಕದ ಕಣ್ಣರಳಿಸಿವೆ.
ದೊರೆತ ಕಾಣಿಕೆ ಹಣದ ಹೊರತಾದ ಚಿನ್ನ, ಬೆಳ್ಳಿಗಳ ದರ ನಿರ್ಣಯಿಸಿದರೆ ಒಟ್ಟು ಆದಾಯ ಇನ್ನಷ್ಟು ಕೋಟಿಯಾಗಿ ಹೆಚ್ಚಲಿದೆ. ಓಣಂ ಸಂಭ್ರಮಾಚರಣೆಗಿಂತ ಮುನ್ನವೇ ಇಷ್ಟೊಂದು ಕಾಣಿಕೆ ಬಂದಿರುವಾಗ ಇನ್ನು ಓಣಂ ದಾಟಿದ ಬಳಿಕ ಆದಾಯ ಎಷ್ಟಿರಬಹುದೆಂದು ಅಂದಾಜಿಸಲಸಾಧ್ಯವಾಗಿದೆ.
ಅಂತೂ ಶ್ರೀಕೃಷ್ಣ ಭಗವಾನ್ ಲಕ್ಷ್ಮಿಯನ್ನು ಪಾದಪದ್ಮಗಳಿಗೆ ಕರೆಸಿಕೊಂಡಿದ್ದಾನೆಂದೇ ಭಕ್ತರಿದನ್ನು ಕೊಂಂಡಾಡುತ್ತಿದ್ದಾರೆ.ದೊರೆತ ಕಾಣಿಕೆ ಹಣದ ಹೊರತಾದ ಚಿನ್ನ, ಬೆಳ್ಳಿಗಳ ದರ ನಿರ್ಣಯಿಸಿದರೆ ಒಟ್ಟು ಆದಾಯ ಇನ್ನಷ್ಟು ಕೋಟಿಯಾಗಿ ಹೆಚ್ಚಲಿದೆ. ಓಣಂ ಸಂಭ್ರಮಾಚರಣೆಗಿಂತ ಮುನ್ನವೇ ಇಷ್ಟೊಂದು ಕಾಣಿಕೆ ಬಂದಿರುವಾಗ ಇನ್ನು ಓಣಂ ದಾಟಿದ ಬಳಿಕ ಆದಾಯ ಎಷ್ಟಿರಬಹುದೆಂದು ಅಂದಾಜಿಸಲಸಾಧ್ಯವಾಗಿದೆ.
ಅಂತೂ ಶ್ರೀಕೃಷ್ಣ ಭಗವಾನ್ ಲಕ್ಷ್ಮಿಯನ್ನು ಪಾದಪದ್ಮಗಳಿಗೆ ಕರೆಸಿಕೊಂಡಿದ್ದಾನೆಂದೇ ಭಕ್ತರಿದನ್ನು ಕೊಂಂಡಾಡುತ್ತಿದ್ದಾರೆ.
ಗುರುವಾಯೂರಪ್ಪನ ಪಾದಕ್ಕೆ ಹರಿದುಬಂದ ದಾಖಲೆಯ ಧನ,ಕನಕ: ಕೇವಲ 12 ದಿನದಲ್ಲಿ 6ಕೋಟಿಯ ಸಂಪತ್ತು ಕಾಣಿಕೆ!!
40