49
ದೆಹಲಿ: ಹಿರಿಯ ಎಡಪಂಥೀಯ ಮುತ್ಸದ್ದಿ, ಸಿಪಿಐಎಂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಂ ಯೆಚ್ಚೂರಿ ನಿಧನರಾದರು. ಅವರಿಗೆ 72ವರ್ಷ ವಯಸ್ಸಾಗಿತ್ತು.
ಶ್ವಾಸಕೋಶ ಸಂಬಂಧಿ ಅಣುಭಾಧೆಯ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರ ಆರೋಗ್ಯ ಸ್ಥಿತಿಯಲ್ಲಿ ತೀವ್ರ ಏರುಪೇರಾಗಿತ್ತು. ಇಂದು ಅಪರಾಹ್ನ ಮರಣ ಸಂಭವಿಸಿತೆಂದು ದೃಢೀಕರಿಸಲಾಯಿತು.
ಕಳೆದ 32ವರ್ಷಗಳಿಂದ ಪೋಲಿಟ್ ಬ್ಯೂರೋ ಸದಸ್ಯರಾಗಿದ್ದ ಅವರು 2015ರಿಂದ ಪಕ್ಷದ ರಾಷ್ಠ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೂಲತಃ ಆಂಧ್ರಪ್ರದೇಶದವರಾದ ಯೆಚ್ಚೂರಿ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕೀಯಕ್ಕೆ ಜಿಗಿದಿದ್ದರು. 1975ರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಹಂತ ಹಂತವಾಗಿ ಮೇಲೇರಿ ಪಕ್ಷದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ್ದರು.
ಪಕ್ಷದ ತಾತ್ವಿಕ ಮುಖವಾಗಿ ಅವರು ಗುರುತಿಸಿದ್ದರು.