ಉಪ್ಪಳ: ಪ್ರತಾಪನಗರ ಶಿವಶಕ್ತಿ ಮೈದಾನದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ಕಳೆದ ಐದು ದಿನಗಳ ಕಾಲ ವಿವಿಧ ಸಂಸ್ಕೃತಿ ಕ, ವೈದಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ಬಹಳ ವಿಜೃಂಭಣೆಯಿoದ ಭಾನುವಾರ ಸಂಪನ್ನಗೊoಡಿತು. ಸಮಾರೋಪ ಕಾರ್ಯಕ್ರಮದ ಬಳಿಕ ಹೊರಟ ಬೃಹತ್ ಶೋಭಾಯಾತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಕುಣಿತ ಭಜನೆ, ಹುಲಿ ವೇಷ ಶೋಭಾಯಾತ್ರೆಗೆ ಮೆರಗನ್ನು ನೀಡಿತು. ಶೋಭಾಯಾತ್ರೆ ಸೋಂಕಾಲು , ಕೈಕಂಬ, ಐಲ ಮಹಾದ್ವಾರದ ಮೂಲಕ, ಬೋವಿ ಶಾಲಾ ಮಾರ್ಗವಾಗಿ ಐಲ ಶಿವಾಜಿ ನಗರದ ಸಿಂಧೂ ಮಹಾ ಸಾಗರದಲ್ಲಿ ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ ವಿಸರ್ಜನಾ ಸಮಿತಿ ಇದರ ಕಾರ್ಯಕರ್ತರ ನೇತೄತ್ವದಲ್ಲಿ ವಿಗ್ರಹದ ಜಲಸ್ತಂಭನ ನಡೆಯಿತು.
ಮುಳಿಂಜ ಶಿವತೀರ್ಥಪದವು ಗಣೇಶೋತ್ಸವ ಈ ಬಾರಿ 45ನೇ ವರ್ಷದಾಗಿದ್ದು ಸೋಮವಾರ ವಿಗ್ರಹ ವಿಸರ್ಜನಾ ಶೋಭಾಯಾತ್ರೆ ನಡೆಯಿತು.
ಶಿವತೀರ್ಥ ಪದವು ಮಂದಿರದಿಂದ ಹೊರಟ ಶೋಭಾಯಾತ್ರೆ ಪಚ್ಲಂಪಾರೆ, ಉಪ್ಪಳಪೇಟೆ, ರೈಲುನಿಲ್ದಾಣ ರಸ್ತೆಮೂಲಕ ಸಾಗಿ ರಾತ್ರಿ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಇವರಿಂದ ಸ್ವಾಗತ, ಮಹಾಮಂಗಳಾರತಿ ಬಳಿಕ ಹನುಮಾನ್ ನಗರದ ಸಿಂಧೂಸಾಗರದಲ್ಲಿ ಜಲಸ್ತಂಭನ ನಡೆಯಿತು. ನೂರಾರು ಮಂದಿ ಶ್ರದ್ದಾಭಕ್ತಿಯಿಂದ ಪಾಲ್ಗೊಂಡರು.