ಕಣಿಪುರ ಸುದ್ದಿಜಾಲ
ಕೇರಳದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಂಟಿ ಆರ್‌ಟಿಒ ನೇತೃತ್ವದಲ್ಲಿ ಮಹಿಳೆಯರಿಗೆ ಘನ ವಾಹನ ಚಾಲನಾ ಪರೀಕ್ಷೆ ನಡೆಸಲಾಯಿತು. ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ಜಂಟಿ ಆರ್‌ಟಿಒ ಬೃಂದಾ ಸನಿಲ್ ಘನ ವಾಹನ ಚಾಲನೆ ಪರೀಕ್ಷೆ ನಡೆಸಿದರು.
ಚಿತ್ತೂರು ಜಂಟಿ ಆರ್‌ಟಿಒ ಬೃಂದಾ ಸನಿಲ್ ಅವರು ಪರೀಕ್ಷಾರ್ಥಿಗಳ ಚಾಲನಾ ದಕ್ಷತೆಯನ್ನು ಪರೀಕ್ಷಿಸಿದರು. ಇದುವರೆಗೆ ಪುರುಷ ಅಧಿಕಾರಿಗಳು ಮಾತ್ರ ಘನ ವಾಹನ ಪರೀಕ್ಷೆ ನಡೆಸುತ್ತಿದ್ದರು. ಬಸ್, ಲಾರಿ ಸೇರಿದಂತೆ ಘನ ವಾಹನಗಳನ್ನು ಓಡಿಸುವ ಅನೇಕ ಮಹಿಳೆಯರಿದ್ದರೂ, ಡ್ರೈವಿಂಗ್ ಪರೀಕ್ಷೆಯನ್ನು ಪುರುಷರ ಮೇಲುಸ್ತುವಾರಿಯಲ್ಲೇ ನಡೆಸಲಾಗುತ್ತಿತ್ತು.
ಮಹಿಳೆಯರಿಗೆ ಘನವಾಹನ ಚಾಲನಾ ಪರಿಶೀಲನೆ ಮತ್ತು ಪರೀಕ್ಷೆ ಮಹಿಳೆಯರಿಂದಲೇ ನಡೆದುದರಲಿ ವಿಶೇಷವಿಲ್ಲ. ಇಂತಹ ಜವಾಬ್ದಾರಿಯು ತನ್ನ ಕರ್ತವ್ಯದ ಭಾಗವಾಗಿದೆ. ತನಗೆ ಅರ್ಹತೆ ಇರುವುದರಿಂದಲೇ ಈ ಅವಕಾಶ ಒಲಿದಿದೆ ಎಂದು ಬೃಂದಾ ಸನಿಲ್ ಹೇಳಿದರು.
ಪರೀಕ್ಷಾರ್ಥಿ ಮಹಿಳೆಯರಿಗೆ ಬಸ್‌ನಲ್ಲಿ ರಸ್ತೆ ಸಂಚಾರದ ಚಾಲನಾ ಪರೀಕ್ಷೆ ನಡೆಸಲಾಯಿತು. ಅಭ್ಯರ್ಥಿಗಳಿಗೂ ಟೆನ್ಷನ್ ಇಲ್ಲದೆ ವಾಹನ ಚಲಾಯಿಸುವ ಅವಕಾಶ ಕಲ್ಪಿಸಲಾಗಿಯಿತು. ಎಲ್ಲಾ ಸಹೋದ್ಯೋಗಿಗಳು ತುಂಬಾ ಬೆಂಬಲ ನೀಡಿದರೆಂದು ಬೃಂದಾ ಸನಿಲ್ ಹೇಳಿದರು.