ಬೆಂಗಳೂರು(ಸೆ.5)
ಕೇರಳದ ಮಾದರಿಯಲ್ಲೇ ಕನ್ನಡ ಚಿತ್ರೋದ್ಯಮದಲ್ಲೂ ಮಹಿಳೆಯರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ತನಿಖಾವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತ್ರೃತ್ವದ ಆಯೋಗ ಸಮಿತಿ ರಚಿಹಬೇಕೆಂದು FIRE ಸಂಘಟನೆ ಒತ್ತಾಯಿಸಿದೆ.
ಈ ಸಂಘಟನೆಯು ನಟ ಚೇತನ್ ನೇತೃತ್ವದಲ್ಲಿದ್ದು ಚಲನಚಿತ್ತರೋದ್ಯಮದಲ್ಲಿ ಹಕ್ಕುಗಳು ಮತ್ತು ಸಮಾನತೆಗಾಗಿ ಚಟುವಟಿಕಾ ನಿರತವಾಗಿದೆ.
ಸಿನಿಮಾ ರಂಗದ 153 ನಟ,ನಟಿಯರು ಈ ಬೇಡಿಕೆಯ ಮನವಿಗೆ ಸಹಿ ಹಾಕಿ ಕನ್ನಡ ಚಿತ್ರೋದ್ಯಮದಲ್ಲೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಿದ್ದು, ತನಿಖೆ ನಡೆಯಬೇಕೆಂದು ಆಗ್ರಹಿಸಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಮಹಿಳೆಯರಿಗೆ ಸುರಕ್ಷಿತ ಮತ್ತು ಸಮಾನವಾದ ದುಡಿಮೆಯ ವಾತಾವರಣ ಸೃಷ್ಟಿಸಲು ತನಿಖೆಯ ಅಗತ್ಯವಿದೆ. ಸುಪ್ರೀಂ ಕೋರ್ಟು ಇಲ್ಲವೇ ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರನ್ನು ತನಿಖಾ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಿನಿಮಾ ರಂಗದಲ್ಲಿ ದುಡಿಯುವ ಮಹಿಳೆ ಉದ್ಯೋಗ ಕ್ಷೇತ್ರದಲ್ಲಿ ಅಸುರಕ್ಷತೆ, ಲೈಂಗಿಕ ದೌರ್ಜನ್ಯ, ಶೋಷಣೆ, ಅಸಮಾನತೆ ಎದುರಿಸುತ್ತಿದ್ದಾರೆಂದು 150ಕ್ಕೂ ಅಧಿಕ ಮಂದಿ ಸಿನಿಮಾರಂಗದ ಯುವ ಕಲಾವಿದ,ಕಲಾವಿದೆಯರೇ ಸಹಿ ಹಾಕಿ ನೀಡಿದ ಮನವಿಯ ಹಿನ್ನೆಲೆಯಲ್ಲಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದುದು ಅನಿವಾರ್ಯ ಆಗಿದೆ. ತನಿಖೆ ನಡೆದರೆ ಕೇರಳದಂತೆ ಕನ್ನಡ ಚಿತ್ರರಂಗದಲ್ಲೂ ಅಲ್ಲೋಲ,ಕಲ್ಲೋಲಗಳುಂಟಾಗಬಹುದೆಂದು ಕಲಾವಿದೆಯರು ಹೇಳುತ್ತಾರೆ.
ಸರಕಾರ ನೇಮಿಸುವ ಸಮಿತಿಯು ಮೂರು ತಿಂಗಳಲ್ಲಿ ತನಿಖಾವರದಿ ನೀಡಬೇಕು ಮತ್ತು ಅದನ್ನು ಗೌಪ್ಯತನ ಕಾಪಾಡಿ ತ್ವರಿತವಾಗಿ ಸಾರ್ವಜನಿಕಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.