ಕನ್ನಡ ನಾಡಿನ ಶಾಲೆಗಳಲ್ಲಿ ಸರಳ ಕನ್ನಡ ಬೋಧನೆ ಅಗತ್ಯ: ರಾಜ್ಯದಲ್ಲಿ ಕನ್ನಡವೇ ಮುಖ್ಯ ಭಾಷೆ ಆಗಬೇಕು ಸುಳ್ಯದಲ್ಲಿ ಪತ್ರಕರ್ತರೊಂದಿಗೆ ಡಾ. ಬಿಳಿಮಲೆ ಮುಖಾಮುಖಿ

by Narayan Chambaltimar

ಕಣಿಪುರ ಸುದ್ದಿಜಾಲ

ಸುಳ್ಯ: ( ಸೆ.4)
ಪ್ರಸ್ತುತ ಕನ್ನಡನಾಡಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಮತ್ತು ಹೊಸ ರೀತಿಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸಗಳು ಆಗಬೇಕು. ಇದಕ್ಕಾಗಿ ಶಾಲೆ, ಮದರಸ ಸಹಿತ ಶಿಕ್ಷಣ ಕೇಂದ್ರದಲ್ಲಿ ಕನ್ನಡ ಭಾಷೆಯನ್ನು ಸರಳೀಕರಣಗೊಳಿಸಿ ಬೋಧಿಸುವ ಅನಿವಾರ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ “ಮೀಟ್ ದಿ ಪ್ರೆಸ್” ಕಾರ್ಯಕ್ರಮದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಮಗುವಿನ ಸರ್ವಾಂಗೀಣ ವಿಕಾಸಕ್ಕೆ 5ನೇ ತರಗತಿಯವರೆಗೆ ಮಾತೃಭಾಷೆ ಯಲ್ಲೇ ಶಿಕ್ಷಣ ನೀಡಬೇಕಾದುದು ಅಗತ್ಯ. ಮಕ್ಕಳ ಬಾಲ್ಯದ ವಿಕಸನಕ್ಕೆ ಮಾತೃಭಾಷೆ ಶಿಕ್ಷಣ ಅಗತ್ಯ. ನಂತರ 6 ನೇ, 10ನೇ ತರಗತಿಯಿಂದ ಇತರ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು ಎಂದು‌ ಹೇಳಿದರು.ಕನ್ನಡವನ್ನು ಕರ್ನಾಟಕದಲ್ಲಿ ಬಲಿಷ್ಠ ಗೊಳಿಸುವುದು ಪ್ರಾಧಿಕಾರದ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಸರಕಾರಗಳು ನೀಡಿದ ಆದೇಶಗಳು ಅನುಷ್ಠಾನಕ್ಕೆ ಬಂದಿದೆಯೋ ಎಂದು ನೋಡುವುದು ಪ್ರಾಧಿಕಾರದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಕನ್ನಡ ಅನುಷ್ಠಾನ ಶೇ. 100 ಅನುಷ್ಠಾನ ಆಗಬೇಕು ನಮ್ಮ ಉದ್ದೇಶ. ಆದರೂ 60% ಕನ್ನಡ ಅನುಷ್ಠಾನ ಆಗಲೇಬೇಕು ಎಂದ ಅವರು. ಸರಕಾರಿ, ಖಾಸಗಿ ಕಚೇರಿ, ಅಂಗಡಿ, ಸಂಘ ಸಂಸ್ಥೆಗಳ ನಾಮಫಲಕಗಳಲ್ಲಿ 60% ಕನ್ನಡ ಬಳಕೆ ಮಾಡಲೇಬೇಕು. ಆದೇಶವನ್ನು ಪಾಲನೆ ಮಾಡದಿದ್ದರೆ ಸ್ಥಳೀಯ ಸಂಸ್ಥೆಗಳು ಪರವಾನಿಗೆ ನೀಡುವಾಗ ಕಠಿಣವಾದ ನಿರ್ಧಾರ ಕೈಗೊಳ್ಳಬೇಕು ಎಂದರು.

ಕನ್ನಡದ ಬಗ್ಗೆ ಜನರಿಗೆ ಆಸಕ್ತಿ ಇಲ್ಲದಿದ್ದರೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲಸ‌ ಯಶಸ್ವಿಯಾಗುವುದಿಲ್ಲ ಎಂದ ಅವರು ಕೆಪಿಎಸ್ಸಿ ಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು ಆಗಿರುವುದು ನಿಜ. ಅವುಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರವು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದು, ಇದೀಗ ಮುಖ್ಯಮಂತ್ರಿಗಳು ಪುನರ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಆದೇಶ ಮಾಡಿರುವು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು , ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ?ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ , ಪೂವಪ್ಪ ಕಣಿಯೂರು , ಶಶಿಧರ ಎಂ.ಜೆ, ಶಾಫಿ ಕುತ್ತಮೊಟ್ಟೆ, ಲೋಕೇಶ್ ಊರುಬೈಲು ಮೊದಲಾದವರು ಇದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00