ಕೊಂಡೆವೂರು ಶ್ರೀಗಳ ಸನ್ಯಾಸದೀಕ್ಷೆಗೆ 22ರ ವರ್ಧಂತಿ: ಹತ್ತು ಕುಟುಂಬಗಳಿಗೆ ಭೂದಾನ

by Narayan Chambaltimar

ಕಣಿಪುರ ಸುದ್ದಿಜಾಲ

ಉಪ್ಪಳ ಸಮೀಪದ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪೀಠ ಪ್ರತಿಷ್ಠ ದಿನ ಮತ್ತು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸಂನ್ಯಾಸಾಶ್ರಮ ಸ್ವೀಕಾರ ಮಾಡಿದ 22 ನೇ ವಾರ್ಷಿಕ ದಿನ ಕಾರ‍್ಯಕ್ರಮವು ಶ್ರೀ ವಿಷ್ಣು ಸಹಸ್ರನಾಮ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು. ಈ ಸಂದರ್ಭ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ ಕಳೆದ 22 ವರ್ಷಗಳಿಂದ ತಮ್ಮೊಂದಿಗೆ ಎಲ್ಲಾ ಚಟುವಟಿಕೆಗಳನ್ನು ಬೆಂಬಲಿಸಿ ಮಠವನ್ನು ಬೆಳೆಸಿದವರೆಲ್ಲರನ್ನು ಶ್ಲಾಘಿಸಿದರು. ದಣಿವರಿಯದೆ ಶ್ರಮಿಸಿದ ಕಾರ್ಯಕರ್ತರ ಕೊಡುಗೆಯನ್ನು ಸ್ಮರಿಸಿಕೊಂಡರು.

ದಾನಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರಾದ ಶ್ರೀಪಾದ ಯಸ್ಸೋ ನಾಯಕ್ ಮತ್ತು ರಾಜ್ಯಸಭಾ ಸದಸ್ಯ ಕೆ ನಾರಾಯಣ ಸ್ಪಾನ್ ಪ್ರಿಂಟ್ ಬೆಂಗಳೂರು ರವರು ಶ್ರೀ ಮಠದ ಶಿಸ್ತುಬದ್ದ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳನ್ನು ಹೃತ್ಪೂರ್ವಕವಾಗಿ ಕೊಂಡಾಡಿದರು. ಸಭೆಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಭೂದಾನ ನೀಡಿದ ಕಿರಣ್ ಕುಮಾರ್ ಭಂಡಾರಿ, ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಮಸ್ಕತ್‌ನ ವಿಶ್ವನಾಥನ್ ವೆಂಗರೆ, ಮಂಗಳೂರಿನ ಉದ್ಯಮಿ ಎ.ಜೆ ಶೇಖರ್ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಆಶ್ರಮದ “ಆಶ್ರಯ” ಯೋಜನೆಯಡಿಯಲ್ಲಿ ಸ್ವಂತ ಭೂಮಿ ಇಲ್ಲದ ಹತ್ತು ಬಡ ಕುಟುಂಬಗಳಿಗೆ ಭೂದಾನವನ್ನು ನೀಡಲಾಯಿತು. ಮಂಗಳೂರು ಕರಂಗಲ್ಪಾಡಿಯ ಕಿರಣ್ ಭಂಡಾರಿಯವರು ತಮ್ಮ ಉದಾರ ಕೊಡುಗೆಯಾಗಿ 1 ಎಕರೆ 19 ಸೆಂಟ್ಸ್ ಭೂಮಿಯ ಹಕ್ಕು ಪತ್ರವನ್ನು ಸ್ವಾಮೀಜಿಯವರಿಗೆ ಹಸ್ತಂತರಿಸಿದರು. ಇದೇ ಸಂದರ್ಭದಲ್ಲಿ ಕಿರಣ್ ಭಂಡಾರಿ ದಂಪತಿಗಳನ್ನು ಅವರ ಸೇವೆಗಾಗಿ ಸನ್ಮಾನಿಸಲಾಯಿತು. ದರ್ಭೆತಡ್ಕದ ಶಂಕರ ವೇದ ವಿದ್ಯಾ ಗುರುಕುಲದ ವಿದ್ಯಾರ್ಥಿಗಳಿಂದ ವೇದಘೋಷದೊಂದಿಗೆ ಆರಂಭಗೊಓಡ ಸಭೆಯಲ್ಲಿ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರೆ, ಶ್ರೀ ಮೋನಪ್ಪ ಭಂಡಾರಿಯವರು ಧನ್ಯವಾದಗೈದರು. ಶ್ರೀ ದಿನಕರ ಹೊಸಂಗಡಿ ಹಾಗೂ ಅಶೋಕ್ ಬಾಡೂರು ಕಾರ್ಯಕ್ರಮ ನಿರೂಪಿಸಿದರು.

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00