ಕಣಿಪುರ ಸುದ್ದಿಜಾಲ
ಉತ್ತರಕನ್ನಡದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವ “ಯಕ್ಷ ದೀಕ್ಷಾ”ಯೋಜನೆಯ ಉದ್ಘಾಟನೆ ಕೆರೆಮನೆಯ “ಯಕ್ಷಾಂಗಣ” ಗುಣವಂತೆಯಲ್ಲಿ ಸಂಪನ್ನಗೊಂಡಿತು.
ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ತರಬೇತಿಗೆ ಶುಭಾರಂಭದ ಚಾಲನೆ ನೀಡಿದರು.
“ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿದು, ಬೆಳೆಯಬೇಕಾದರೆ ಪೂರ್ಣ ಕಲೆಯಾದ ಯಕ್ಷಗಾನವನ್ನು ವಿದ್ಯಾರ್ಥಿಗಳು ಕಲಿಯಬೇಕಾಗಿದೆ. ಯಕ್ಷಗಾನವು ದೈವಿಕ ಕಲೆ ಯಾಗಿದ್ದು, ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಉಜ್ವಲ ಗೊಳಿಸುವ, ತನ್ಮೂಲಕ ಭಾಷೆ, ಮನಸ್ಸು, ಭಾವವನ್ನ ಶುದ್ಧೀಕರಿಸಲು ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅಕಾಡೆಮಿಯಿಂದ ಈ ತರಬೇತಿಗೆ ಸಂಪೂರ್ಣ ಸಹಾಯ, ಸಹಕಾರ ಕೊಡುತ್ತೇನೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
ಈ ಸುಸಂದರ್ಭದಲ್ಲಿ ಯಕ್ಷಾಂಗಣಕ್ಕೆ ಮೊದಲ ಬಾರಿ ಆಗಮಿಸಿದ ಪ್ರಯುಕ್ತವಾಗಿ ಅವರನ್ನು ಗೌರವ ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಶ್ರೀಮಯಕ್ಕೆ 1ಲಕ್ಷ ದೇಣಿಗೆ
ಮುಖ್ಯ ಅಬ್ಯಾಗತರಾಗಿ ಉಪಸ್ಥಿತರಿದ್ದ ಆನಂದ ಹಾಸ್ಯಗಾರ ಇವರು ಮಾತನಾಡಿ ಯಕ್ಷಗಾನ ಕಲೆ ಈ ಮೊದಲು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರನ್ನು ಮಾನವತಾವಾದಿಯನ್ನಾಗಿ ಮಾಡಲು ಪ್ರೇರಣೆ ನೀಡುತ್ತಿತ್ತು. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಯಕ್ಷಗಾನ ಕಲೆಗೆ ಆದ್ಯತೆ ಕಡಿಮೆಯಾಗಿದೆ. ಪ್ರಬುದ್ಧ ಕಲಾವಿದರ ಸಂಗಡ ಪ್ರೇಕ್ಷಕರು ಕೂಡ ಅನಿವಾರ್ಯವಾಗಬೇಕಾದರೆ ಈ ತರಬೇತಿ ಅವಶ್ಯಕ. ಕೆರೆಮನೆ ಶಿವಾನಂದ ಹೆಗಡೆಯವರ ಈ ಪ್ರಯತ್ನ ಶ್ಲಾಘನೀಯ. ನಿರಂತರವಾಗಿ ಯಕ್ಷ ದೀಕ್ಷಾ ಕಾರ್ಯಕ್ರಮ ಮುಂದುವರೆಯಲಿ ಎಂದು ಹಾರೈಸುತ್ತಾ, ಒಂದು ಲಕ್ಷ ರೂ ದೇಣಿಗೆಯನ್ನು ಈ ಸಂದರ್ಭದಲ್ಲಿ ಘೋಷಿಸಿದರು.ಇನ್ನೋರ್ವ ಅಭ್ಯಾಗತರಾಗಿ ಉಪಸ್ಥಿತರಿದ್ದ ಎಲ್.ಎಂ. ಹೆಗಡೆ ಇವರು ಶಂಭು ಹೆಗಡೆ ಇವರು ಬಿತ್ತಿದ ವೈಚಾರಿಕ ಬೀಜ ವಾಸುದೇವ ಐತಾಳ ರವರ ಪೋಷಕತ್ವದಲ್ಲಿ, ಮೊಳಕೆ ಒಡೆದು, ಎಳೆ ಮಕ್ಕಳ ಕಲಾಸಕ್ತಿಗೆ ಒಂದು ತರಬೇತಿಯ ವೇದಿಕೆ ಆಗಿರುವುದು ಸಂತೋಷ ತಂದಿದೆ. ಈ ಸಂದರ್ಭದಲ್ಲಿ ಬಡಗು ತಿಟ್ಟಿಗೆ ಕೊಡುಗೆ ನೀಡಿದ ಕರ್ಕಿ ಹಾಸ್ಯಗಾರ ಕುಟುಂಬ ಮತ್ತು ಕಾರ್ಯಯೋಜನೆ ಮಾಡುತ್ತಿರುವ ಕೆರಮನೆ ಕುಟುಂಬ ಸಾಕ್ಷಿಯಾಗುತ್ತಿರುವುದು ಅನನ್ಯ ಎಂದರು. ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆದು ಗೆಜ್ಜೆ ಕಟ್ಟಿ, ಹೆಜ್ಜೆ ಇಟ್ಟು ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡಿ ಎಂದು ಕರೆ ನೀಡಿದರು.
ಜನತಾ ವಿದ್ಯಾಲಯ ಕಾಸರಕೋಡ ಮುಖ್ಯಾಧ್ಯಾಪಕ ರವಿ ಪೂಜಾರಿ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆಯನ್ನ ವಹಿಸಿದ್ದ ಕಲಾಚಿಂತಕ, ಕಲಾಪೋಷಕರಾದ ವಾಸುದೇವ ಐತಾಳ್ ಇವರು ಮಾತನಾಡಿ ಶಂಭು ಹೆಗಡೆ ಇವರು ಅಮೆರಿಕಕ್ಕೆ ಬಂದಾಗ ಹೇಳಿದ ಮಾತು ಇಂದು ಸಾಕಾರವಾಗುತ್ತಿದೆ ಎಂದು ಸಂಭ್ರಮಿಸಿದರು. ಶಂಭು ಹೆಗಡೆಯವರ ಈ ಚಿಂತನೆ ಇಂದು ಶಿವಾನಂದ ಹೆಗಡೆಯವರ ಸಹಾಯದಲ್ಲಿ ಸಾಕಾರಗೊಳ್ಳುತ್ತಿರುವುದರ ಸಂಪೂರ್ಣ ಭರವಸೆಯೊಂದಿಗೆ ನಾನು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದೇನೆ. ವಿದ್ಯಾರ್ಥಿಗಳು ಈ ತರಬೇತಿಯ ಫಲವನ್ನ ಅನುಭವಿಸಿ, ತನ್ಮೂಲಕ ಸಮಾಜದ ಒಬ್ಬ ಶ್ರೇಷ್ಠ ಕಲಾವಿದ ಅಥವಾ ಒಬ್ಬ ಶ್ರೇಷ್ಠ ಪ್ರೇಕ್ಷಕನಾಗಲು ಪ್ರಯತ್ನಿಸಿ ಎಂದು ಹಾರೈಸಿದರು. ಕಾರ್ಯಕ್ರಮದ ಸಂಯೋಜಕ ಶಿವಾನಂದ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ತರಬೇತಿಯ ಧ್ಯೇಯೋದ್ದೇಶಗಳನ್ನ ತಿಳಿಸಿ, ಸರ್ವರನ್ನು ಸ್ವಾಗತಿಸಿದರು. ಗಣೇಶ ಯಾಜಿ ಮಾವಿನಕೆರೆ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ಗೈದರು. ಶ್ರೀ ಶ್ರೀಧರ ಪಿ ಗೌಡ. , ಶ್ರೀಧರ ಮರಾಠಿ ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯ ಅಧ್ಯಾಪಕರಾದ ವಿ.ಎಚ್. ನಾಯ್ಕ, ಶೈಲಾ ಭಟ್ಟ, ಎಸ್.ಎಂ.ಹೆಗಡೆ ಉಪಸ್ಥಿತರಿದ್ದರು. ರಾಜ್ಯ ಪ್ರಶಸ್ತಿ ಶಿಕ್ಷಕರದ ಪ್ರಕಾಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.