31
ಉಡುಪಿ: ಎರೊಸ್ಪೇಸ್ ಮೆನನ್ ಎಂಡ್ ಮೆನನ್ ಲಿಮಿಟೆಡ್ ನಲ್ಲಿ ಸಲಹೆಗಾರಾಗಿರುವ ಡಾ. ಆರ್. ರಾಘವೇಂದ್ರಭಟ್ ಮತ್ತು ಕೆ. ಎಂ. ಸಿ ಮಣಿಪಾಲದಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ಡಾ. ವಿನುತಾ. ಆರ್. ಭಟ್ ದಂಪತಿಗಳು ಉಡುಪಿ ಯಕ್ಷಗಾನ ಕಲಾರಂಗಕ್ಕೆ ಉತ್ತಮ ಗುಣಮಟ್ಟದ ಹತ್ತು ಊಟದ ಟೇಬಲ್ ಮತ್ತು ಮೂವತ್ತು ಕುರ್ಚಿಗಳನ್ನು ದೇಣಿಗೆಯಾಗಿ ನೀಡಿದರು.
ಸೆಪ್ಟಂಬರ್ 1 ರಂದು ಸಂಸ್ಥೆಯ ನೂತನ ಕಟ್ಟಡಕ್ಕೆ ಭೇಟಿಯಿತ್ತ ಡಾ. ಭಟ್ ದಂಪತಿಗಳನ್ನು ಅಧ್ಯಕ್ಷ ಎಂ. ಗಂಗಾಧರ ರಾವ್ ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಮ್ಮ ಬಂಧುಗಳಿಗೆ, ಸ್ನೇಹಿತರಿಗೆ ಸಂಸ್ಥೆಯ ಕಾರ್ಯಚಟುವಟಿಕೆ ಪರಿಚಯಿಸಿ ಸಂಸ್ಥೆಯನ್ನು ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸುತ್ತಿರುವ ಹಿರಿಯರಾದ ಯು. ಎಸ್. ರಾಜಗೋಪಾಲ ಆಚಾರ್ಯರು ಉಪಸ್ಥಿತರಿದ್ದರು.
ಉಡುಪಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಅವರನ್ನು ಬರಮಾಡಿಕೊಂಡರು.