ಕಣಿಪುರ ವೆಬ್ ಡೆಸ್ಕ್
ಮಂಗಳೂರು: ಕಾಸರಗೋಡು ಭಾಗದಿಂದ ರೈಲಿನಲ್ಲಿ ದೈನಂದಿನ ಮಂಗಳೂರನ್ನು ಕಲಿಕೆಗೆ ಆಶ್ರಯಿಸುವ ವಿದ್ಯಾರ್ಥಿಗಳ ಉಪಟಳ ನಿಯಂತ್ರಣಕ್ಕೀಗ ರೈಲ್ವೇ ಮುಂದಾಗಿದೆ.
ಮಂಗಳೂರು ಸೆಂಟ್ರಲ್ ಆರ್ ಪಿ ಎಫ್ ವತಿಯಿಂದ ಮೊದಲ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಸಹಿತ ತಿಳುವಳಿಕೆ ಮೂಡಿಸಲಾಗಿದೆ.
ರೈಲಿನಲ್ಲಿ ಗುಂಪು,ಗುಂಪಾಗಿ ರೇಗಿಂಗ್, ಗೂಂಡಾಗಿರಿ, ಬೊಬ್ಬೆ, ಕೇಕೆ ಹಾಕುವ ಕಿರುಕುಳದಿಂದಾಗಿ ಇತರ ಪ್ರಯಾಣಿಕರಿಗೆ ಸಂಚಾರವೇ ದುಸ್ಸಾಹಸವಾಗಿತ್ತು. ಈ ಕುರಿತು ಪ್ರಯಾಣಿಕರು ದೂರಿದ ಹಿನ್ನೆಲೆಯಲ್ಲಿ ರೈಲ್ವೇ ಆರ್ ಪಿ ಎಫ್ ಇನ್ಸ್ಪೆಕ್ಟರ್ ಅಕ್ಬರ್ ಆಲಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕಾ ಕ್ರಮದಂಗವಾಗಿ ತಿಳುವಳಿಕೆ ಮೂಡಿಸಲಾಗಿದೆ.
ದೈನಂದಿನ ಬೆಳಿಗ್ಗೆ ಮತ್ತು ಸಂಜೆ ಮಂಗಳೂರು ಕಾಸರಗೋಡು ನಡುವಣ ರೈಲಿನಲ್ಲಿ ವಿದ್ಯಾರ್ಥಿಗಳ ಕಿರುಕುಳದಿಂದಾಗಿ ಪ್ರಯಾಣಿಕರಿಗೆ ಸಂಚರಿಸಲಾಗುತ್ತಿಲ್ಲವೆಂದು ಹಲವು ದೂರುಗಳು ರೈಲ್ವೇಗೆ ದೊರೆತಿರುವುದಾಗಿ ತಿಳಿದುಬಂದಿದೆ.