ಕಾರ್ಕಳದಲ್ಲಿ “ಯಕ್ಷೋಲ್ಲಾಸ” ಸಂಪನ್ನ : ಹಿರಿಯ ಕಲಾವಿದ ನಿಡ್ಲೆ, ಕುಮಾರಗೌಡರಿಗೆ ಪ್ರಶಸ್ತಿ

by Narayan Chambaltimar

ಕಾಂತಾವರ: ಪ್ರಾಮಾಣಿಕ ಪ್ರಯತ್ನದಿಂದ ಸಂಘಟಿಸಿದ ಕಾರ್ಯಕ್ರಮಗಳ ಯಶಸ್ಸು ದೀರ್ಘಕಾಲ ನೆನಪಿಸುತ್ತದೆ. ಮಾಡುವ ಕಾಯಕದಲ್ಲಿ ಸಾಮಾಜಿಕ ಕಳಕಳಿ , ನಿಸ್ವಾರ್ಥ ಭಾವ , ಕಲಾಪ್ರೇಮ , ಇದ್ದರೇನೆ ಫಲವೂ ಸಿದ್ದಿಸುವುದು.
ಎಂದು ಮಂಗಳೂರು ವಿ.ವಿಯ ಧ. ಮಂ. ತುಳು ಅದ್ಯಯನ ಪೀಠದ ಸಂಯೋಜಕ , ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ ಕೆ ಹೇಳಿದರು. ಅವರು ಕಳೆದ ಆದಿತ್ಯವಾರ
ಕಾಂತಾವರದಲ್ಲಿ ಯಕ್ಷದೇಗುಲ ಸಂಸ್ಥೆಯ ಇಪ್ಪತ್ತರಡನೇ ವರ್ಷದ ಯಕ್ಷೋಲ್ಲಾಸ 2024 –
ಸಭಾ ಸಂಭ್ರಮದಲ್ಲಿ ಅದ್ಯಕ್ಷತೆ ವಹಿಸಿ ಮಾತಾಡಿದರು.

ಆ ಸಂಧರ್ಭ ಯಕ್ಷಗಾನದಲ್ಲಿ ಕಲಾವಿದರಾಗಿ ದುಡಿದು ನಿವೃತ್ತಿ ಹೊಂದಿದ ಧರ್ಮಸ್ಥಳ ಮೇಳದ ನಿಡ್ಲೆ ಗೋವಿಂದ ಭಟ್ ರಿಗೆ ಪುತ್ತೂರು ದಿ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಮತ್ತು ಸುರತ್ಕಲ್ ಮೇಳದ ಪುತ್ತಿಗೆ ಕುಮಾರ ಗೌಡರಿಗೆ ಬಾಯಾರು ದಿ. ಪ್ರಕಾಶ್ವಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಜಿರೆ ಅಶೋಕ ಭಟ್ ಮತ್ತು ಮೂಡಬಿದ್ರೆ ಶಾಂತಾರಾಮ ಕುಡ್ವ ಇವರು ದಿವಂಗತರುಗಳ ಸಂಸ್ಮರಣೆ ಹಾಗೂ ಪ್ರಶಸ್ತಿ ಭಾಜನರ ಅಭಿನಂದನಾ ಭಾಷಣ ಮಾಡಿದರು.

ಪ್ರಧಾನ ಅಭ್ಯಾಗತರಾಗಿ ಕಾಂತಾವರ ಕನ್ನಡ ಸಂಘದ ಕಾರ್ಯಾದ್ಯಕ್ಷ ಸಾಹಿತಿ ಡಾ. ನಾ ಮೊಗಸಾಲೆ , ಕರ್ಣಾಟಕ ಬ್ಯಾಂಕಿನ ನಿವೃತ್ತ ಜ.ಮೇನೇಜರ್ ಬಿ.ಚಂದ್ರಶೇಖರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳಿಗ್ಗೆ ಬಾರಾಡಿಬೀಡು ಸುಮತಿ ಆರ್ ಬಲ್ಲಾಳ್ ಯಕ್ಷೋಲ್ಲಾಸ ಕಲಾ ಸಂಭ್ರಮವನ್ನು ಉದ್ಘಾಟಿಸಿದರು .ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಶುಭಾಶಂಸನೆ ಗೈದರು. ಗ್ರಾಮ ಪಂಚಾಯತ್ ಅದ್ಯಕ್ಷ ರಾಜೇಶ್ ಕೋಟ್ಯಾನ್ ವೇದಿಕೆಯಲ್ಲಿದ್ದರು.

‘ಯಕ್ಷದೇಗುಲ’ ದ ಅದ್ಯಕ್ಷ ಶ್ರೀಪತಿರಾವ್ ,ಕೋಶಾಧ್ಯಕ್ಷ ಧರ್ಮರಾಜ ಕಂಬಳಿ, ರಮೇಶ ಸೆಟ್ಟಿಗಾರ್, ಲಿಂಗಪ್ಪ ದೇವಾಡಿಗ, ರತನ್ ಬಾರಾಡಿ, ಸಂಜೀವ ಕೋಟ್ಯಾನ್ , ಸದಾನಂದ ಶೆಟ್ಟಿ, ಸಂದೇಶ್ ಮಾರ್ನಾಡ್, ಜಗದೀಶ್ ಜೈನ್ ಬಾಡಾರು, ವೆಂಕಟೇಶ್ ಕಾರ್ಕಳ ಉದಯ್ ಪಾಟ್ಕರ್ , ರಂಜಿತ್ ಹಾಜರಿದ್ದರು.ಕಾರ್ಯದರ್ಶಿ ಮಹಾವೀರ ಪಾಂಡಿ ಸ್ವಾಗತಿಸಿದರು. ಅದ್ಯಾಪಕ ಶಿವಪ್ರಸಾದ್ ಭಟ್ ಕಾರ್ಯಕ್ರಮ ನಿರ್ವಹಿಸಿದರು ಬೆಳುವಾಯಿ ದೇವಾನಂದ್ ಭಟ್ ವಂದಿಸಿದರು. ನಂತರ ಖ್ಯಾತ ಕಲಾವಿದರಿಂದ “ವಿಶ್ವಾಮಿತ್ರ ಮೇನಕೆ” ಯಕ್ಷಗಾನ “ಕರ್ಣಾವಸಾನ ” ತಾಳಮದ್ದಳೆ, ಮತ್ತು ‘ವಿದ್ಯುನ್ಮತಿ ಕಲ್ಯಾಣ’ ಬಯಲಾಟ ಜರಗಿತು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00