ಕಣಿಪುರ ಸುದ್ದಿಜಾಲ
ತಿರುವನಂತಪುರ: ಪ್ರಸಿದ್ಧ ಗಾಯಕರಾದ ಕೆ.ಜೆ. ಜೇಸುದಾಸ್, ಕೆ.ಎಸ್. ಚಿತ್ರ ಮೊದಲಾದವರ ಸಿನಿಮ ಹಾಡು ಮತ್ತು ಸ್ಟೇಜ್ ಷೋ ಗಳಿಗೆ ಗಿಟಾರ್ ನುಡಿಸುತ್ತಿದ್ದ ಪ್ರಸಿದ್ಧ ಕಲಾವಿದ ಜೋಸ್ ಥಾಮಸ್ (54) ವಿಮಾನ ಲ್ಯಾಂಡಾಗುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟರು.
ಅಮೇರಿಕಾದಿಂದ ಕೇರಳದ ತಿರುವನಂತಪುರಕ್ಕೆ ಆಗಮಿಸುತ್ತಿರುವಾಗ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ಘಟನೆ ಸಂಭವಿಸಿದೆ.
ದ.ಆಫ್ರಿಕಾದಲ್ಲಿ ಸ್ಟೇಜ್ ಷೋ ಕಾರ್ಯಕ್ರಮಕ್ಕೆಂದು ತೆರಳಿದ್ದ ಅವರು ಕಾರ್ಯಕ್ಮ ಮುಗಿದು ಮರಳುತ್ತಿರುವಾಗ ಈ ಘಟನೆ ಘಟಿಸಿದೆ.
ಕಳೆದ 35 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿದ್ದ ಅವರು ಅನೇಕ ಟಿ.ವಿ. ರಿಯಾಲಿಟಿ ಷೋ ಮ್ಯೂಸಿಕ್ ಪ್ರೋಗ್ರಾಂ ಮತ್ತು ಸಿನಿಮ ಹಿನ್ನೆಲೆ ಗಾಯನಕ್ಕೆ ನುಡಿಸಿ ಪ್ರಸಿದ್ದರಾಗಿದ್ದರು. 5ವರ್ಷ ಅಮೇರಿಕಾದಲ್ಲಿ ಉಪಕರಣ ಸಂಗೀತ ನುಡಿಸುವಿಕೆಯ ತರಬೇತಿಯೂ ನೀಡಿದ್ದರು.
ಕೆ.ಜೆ.ಜೇಸುದಾಸ್, ಕೆ.ಎಸ್.ಚಿತ್ರಾ ಮೊದಲಾದ ಪ್ರಸಿದ್ಧರ ಗಾಯನಕ್ಕೆ ಖಾಯಂ ಗಿಟಾರ್ ವಾದಕರಾಗಿದ್ದ ಅವರ ಅಗಲುವಿಕೆ ಮಲಯಾಳಂ ಗಾಯನ ಕ್ಷೇತ್ರಕ್ಕೆ ಪ್ರತಿಭಾವಂತ ಕಲಾವಿದನೊಬ್ಬನ ಶೂನ್ಯತೆ ಸೃಷ್ಠಿಸಿದೆ.