ಕರ್ನಾಟಕದ ಪಿಂಚಣಿ ಸೌಲಭ್ಯ ಹೆಚ್ಚಳ: ನಿವೃತ್ತ ಪಿಂಚಣಿದಾರರಲ್ಲಿ ಸಂತಸ

by Narayan Chambaltimar

ಕಣಿಪುರ ಸುದ್ದಿಜಾಲ

ಬೆಂಗಳೂರು: 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಸರಕಾರಿ ನೌಕರರ ಮತ್ತು ನಿವೃತ್ತರ ಪಿಂಚಣಿ ಸೌಲಭ್ಯ ಪರಿಷ್ಕರಿಸಿ ಬುಧವಾರ ಸರಕಾರ ಆದೇಶ ಹೊರಡಿಸಿದೆ.  ವಯೋ ನಿವೃತ್ತಿ ವೇತನ, ವಿಶ್ರಾಂತ ನಿವೃತ್ತ ವೇತನ, ಅಶಕ್ತ ನಿವೃತ್ತ ವೇತನ, ಪರಿಹಾರ ನಿವೃತ್ತ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗಿದೆ.

ಕನಿಷ್ಠ ಪಿಂಚಣಿಯನ್ನು ಮಾಸಿಕ 8,500ರೂ ಗಳಿಂದ 13,500 ರೂ.ಗಳಿಗೆ ಏರಿಸಲಾಗಿದೆ. ಗರಿಷ್ಠ ಮಿತಿಯನ್ನು ಮಾಸಿಕ 73,500ರೂ ಗಳಿಂದ 1,20, 600 ರೂಗಳಿಗೆ ಹೆಚ್ಚಿಸಲಾಗಿದೆ.
ಕುಟುಂಬ ನಿವೃತ್ತಿ ವೇತನವನ್ನು ಕನಿಷ್ಠ 13,500ರೂ ಗಳಿಗೆ ಹಾಗೂ ಗರಿಷ್ಠ 80,400ರೂಗಳಿಗೆ ಪರಿಷ್ಕರಿಸಲಾಗಿದೆ.
ಪರಿಷ್ಕರಣೆಯು ಇದೇ ಆಗಸ್ಟ್ 1ರಿಂದ ಜ್ಯಾರಿಯಾಗುವಂತೆ ಆದೇಶಿಸಲಾಗಿದೆ. ಪಿಂಚಣಿ ಮೊತ್ತ ಏರಿಕೆ ಬಹುಕಾಲದ ಬೇಡಿಕೆಯಾಗಿದೆ. ಈಗ ಪರಿಷ್ಕೃತ ಆದೇಶ ಪ್ರಕಟವಾಗಿರುವುದು ನಿವೃತ್ತ ಪಿಂಚಣಿದಾರರಲ್ಲಿ ಸಂತಸ ಮೂಡಿಸಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00