ಯಕ್ಷಪ್ರಿಯರಲ್ಲಿ ಕೌತುಕ ಮೂಡಿಸಿದ ‘ವೀರ ಚಂದ್ರಹಾಸ’ ಟೀಸರ್

ಏನಿದು ಯಕ್ಷಗಾನವೇ ಸಿನಿಮ ಆಗುತ್ತಿದೆಯಾ..?

by admin

-ಕಣಿಪುರ ಸುದ್ದಿಜಾಲ

                                                                                                                                                            ಯಕ್ಷಗಾನಕ್ಕೆ ಸಿನಿಮ ಕಥೆಗಳೇನೂ ಹೊಸತಲ್ಲ. ಸಿನಿಮ ಕಥೆಗಳನ್ನಾಯ್ದು ಯಕ್ಷಗಾನೀಯವಾಗಿ ಹೆಣದು ಪ್ರದರ್ಶನ ಜಯಭೇರಿ ಕಂಡ ಹಲವು ಪ್ರಸಂಗ ಯಕ್ಷಗಾನದಲ್ಲಾಗಿದೆ. ಆದರೆ ‘ವೀರ ಚಂದ್ರಹಾಸ’ ಎಂಬ ಯಕ್ಷಗಾನ ಪ್ರಸಂಗ ಮಾದರಿಯ ಶೀರ್ಷಿಕೆಯೊಂದಿಗೆ ಯಕ್ಷಗಾನದ ವೇಷ ಕತ್ತಿ ಮಸೆಯುವ ದೃಶ್ಯ ಸಹಿತ ಸಿನಿಮ ಟೀಸರ್ ಬಿಡುಗಡೆಯಾಗಿದ್ದು, ಯಕ್ಷಗಾನ ವಲಯದಲ್ಲಿದು ಕೌತುಕ ಮೂಡಿಸಿದೆ. ಜತೆಯಲ್ಲೇ ಅಬ್ಬರದ ಪ್ರಚಾರವನ್ನೂ ಪಡೆದು ಕುತೂಹಲ ಕೆರಳಿಸಿದೆ.
ಚಂದನವನ ದ ಪ್ರತಿಭಾವಂತ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಬಳಗ ಈ ಸಿನಿಮ ನಿರ್ದೇಶಿಸಿದ್ದು ‘ಭಾರತೀಯ ಸಿನಿಮ ರಂಗದಲ್ಲೇ ಇದೊಂದು ವಿನೂತನ ಮತ್ತು ಭಿನ್ನ ಪ್ರಯೋಗ” ಎಂಬ ಹೇಳಿಕೆಯೊಂದಿಗೆ ಸಿನಿಮ ಕುರಿತು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂತಾರ, ಕೆಜಿಎಫ್ ಮೊದಲಾದ ಚಿತ್ರಗಳ ಬಳಿಕ ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗವೇ ಗೌರವದ ಬೆರಗಿನಿಂದ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ನೆಲಮೂಲದ ಸಂಸ್ಕೃತಿ ಯಕ್ಷಗಾನವನ್ನು ದೃಶ್ಯಮಾಧ್ಯಮದಲ್ಲಿ ಬಿಂಬಿಸುವ ಈ ಪ್ರಯತ್ನವೂ ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಯಕ್ಷಗಾನ ವೇಷಗಳೆರಡು ಯುದ್ಧದಲ್ಲಿ ತೊಡಗಿ ಕತ್ತೆ ಮಸೆಯುವ ದೃಶ್ಯದೊಂದಿಗೆ ಸಿನಿಮ ಟೀಸರ್ ಬಿಡುಗಡೆಯಾಗಿದ್ದು, ಶೀಘ್ರವೇ ಬೆಳ್ಳಿತೆರೆಯಲ್ಲಿ ಯಕ್ಷಗಾನ ಎಂಬ ಅದ್ದೂರಿ ಪ್ರಚಾರ ಪಡೆದಿದೆ. ಕರಾವಳಿಯ ಜನರೆಲ್ಲರೂ ರಂಗಸ್ಥಳದಲ್ಲಷ್ಟೇ ಯಕ್ಷಗಾನ ದೃಶ್ಯವೈಭವ ಕಂಡವರು. ಈಗ ಸಿನಿಮಾದಲ್ಲೂ ಯಕ್ಷಗಾನ ನೋಡುವ ಅವಕಾಶ ಒದಗಿದೆ. ಇಡೀ ದೇಶಕ್ಕೆ ತುಳುನಾಡಿನ ದೈವಾರಾಧನೆಯನ್ನು ಪರಿಚಯಿಸಿದ ಕಾಂತಾರ ಅರಳಿಕೊಂಡ ಅದೇ ನೆಲದ ನಿರ್ದೆಶಕರಿಂದ ಯಕ್ಷಗಾನವೂ ರಾಷ್ಟ್ರಮಟ್ಟಕ್ಕೆ ಅರಳಿ, ಘಮಿಸಬಹುದೇ ಎಂಬುದೀಗ ನಿರೀಕ್ಷೆ.
                                                                                                                                            ಸಿನಿಮ ಜನಪ್ರಿಯ ಮತ್ತು ಪ್ರಭಾವಿ ದೃಶ್ಯಮಾಧ್ಯಮ. ಇಲ್ಲಿ ಯಕ್ಷಗಾನದಂತಹ ಕಲೆಯೊಂದನ್ನು ಹೇಗೆ ಚಿತ್ರಿಸಿಕೊಂಡಿದ್ದಾರೆAಬುದೇ ಕೌತುಕ. ಭಾರತದಲ್ಲಿ ಅನ್ಯಾನ್ಯ ಭಾಷೆಗಳಲ್ಲಿ ಅನೇಕ ಕಲೆಗಳ ಕುರಿತು ಕಲಾತ್ಮಕ ಚಿತ್ರಗಳು ಬಂದಿವೆ. ಈ ಸಾಲಿನಲ್ಲಿ ಕನ್ನಡದಲ್ಲಿ ಕಲೆಯ ಕುರಿತು ಕಲಾತ್ಮಕ ಚಿತ್ರಗಳು ಕಡಿಮೆ ಸಂಖ್ಯೆಯಲ್ಲಿ ಬಂದಿವೆ. ಯಕ್ಷಗಾನವನ್ನರಿಯದ ವಿಶಾಲ ಕನ್ನಡ ಪ್ರದೇಶ ಮತ್ತು ಸಮಗ್ರ ಭಾರತಕ್ಕೆ ನೆಲಮೂಲದ ಕಲೆಯನ್ನು ಪ್ರಚಾರಪಡಿಸಿ, ಪ್ರಭಾವ ಬೀರುವಲ್ಲಿ “ವೀರ ಚಂದ್ರಹಾಸ’ ಯಶಸ್ವಿಯಾಗಲೆಂದೇ ಯಕ್ಷಗಾನ ಪ್ರೇಮಿಗಳ ಹಾರೈಕೆ.


ಈ ಸಿನಿಮದಲ್ಲಿ ಯಕ್ಷಗಾನ ಕಲಾವಿದರು ಯಕ್ಷಗಾನೀಯ ವೇಷದಲ್ಲೇ ಕಾಣಿಸಿಕೊಳ್ಳುವುದು ವಿಶೇಷ. ಈಗಾಗಲೇ ಅನೇಕ ಯಕ್ಷಗಾನ ಕಲಾವಿದರು ಬೇರೆ, ಬೇರೆ ಸಿನಿಮದಲ್ಲಿ ಕಾಣಿಸಿಕೊಂಡಿದ್ದಾರಾದರೂ ಯಕ್ಷಗಾನ ವೇಷಗಳೇ ಪಾತ್ರವಾಗುವ ರೀತಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಬಡಗುತಿಟ್ಟಿನ ಪ್ರಸಿದ್ಧ ಯುವ ಕಲಾವಿದರಾದ ಪ್ರಸನ್ನ ಶೆಟ್ಟಿಗಾರ್, ಉದಯ ಹೆಗಡೆ ಕಡಬಾಳ, ಹಾಸ್ಯಗಾರ ಶ್ರೀಧರ್ ಕಾಸರಕೋಡು, ರವೀಂದ್ರ ದೇವಾಡಿಗ, ಸಿನಿಮ-ಕಿರುತೆರೆ ಮತ್ತು ಯಕ್ಷಗಾನ ಕಲಾವಿದೆ ನಾಗಶ್ರೀ ಜಿ.ಎಸ್, ರಂಗಕಲಾವಿದೆ ಶ್ವೇತ ಅರೆಹೊಳೆ ಸಹಿತ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00