ಕಾಸರಗೋಡು: ಮಲಯಾಳಂ ಭಾಷೆ ಉದಿಸಿದ್ದೇ ಪ್ರಾಚೀನ ತುಳುವಿನಿಂದ. ಅಂಥಾ ತುಳುವಿನ ಶತಮಾನದ ಆಯ್ದ ಕತೆಗಳನ್ನು ಮಲಯಾಳಕ್ಕೆ ಭಾಷಾಂತರಿಸಿದಾಗ ಸಂಸ್ಕೃತಿಯ ಬೆಸುಗೆಯಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಬದಲಾದ ರಾಜಕೀಯ ವಾತಾವರಣದಿಂದ ದ್ರಾವಿಡ ಭಾಷಾ ಸಂಸ್ಕೃತಿಗಳೇ ಅಪಾಯದಲ್ಲಿದೆ. ಅದಕ್ಕೆ ನಾವೇ ಕಾವಲಾಳುಗಳಾಗಬೇಕೆಂದು ಡಾ. ಎ.ಎಂ ಶ್ರೀಧರನ್ ನುಡಿದರು.
ಕೇರಳ ಸಾಹಿತ್ಯ ಅಕಾಡೆಮಿಯ ಈ ವರ್ಷದ ಅತ್ಯುತ್ತಮ ಅನುವಾದ ಸಾಹಿತ್ಯ ಪ್ರಶಸ್ತಿ ವಿಜೇತರಾದ ಅವರನ್ನು ಕಾಸರಗೋಡಿನ ಪಾಲಕುನ್ನ್ ನಲ್ಲಿ ಗೌರವಿಸಿ ಅಭಿನಂದಿಸಿದ ವೇಳೆ ಅವರು ಹೀಗೆಂದರು.
ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕಳಿ ಟ್ರಸ್ಟ್ ನೇತೃತ್ವದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಸಚಿವ, ಶಾಸಕ ಇ. ಚಂದ್ರಶೇಖರನ್ ಗೌರವಾಭಿನಂದನೆ ಸಲ್ಲಿಸಿದರು. ಟ್ರಸ್ಟ್ ಅಧ್ಯಕ್ಷ ಸತೀಶ್ ಕುಮಾರ್, ಕೇರಳ ರಾಜ್ಯ ಜೈವವೈವಿಧ್ಯ ಮಂಡಳಿ ಅಧ್ಯಕ್ಷ ಡಾ. ಬಾಲಕೃಷ್ಣನ್, ಮಾಜಿ ಡಿವೈಎಸ್ಪಿ ದಾಮೋದರನ್ ಮೊದಲಾದವರಿದ್ದರು.
ನಾಟ್ಯರತ್ನಂ ಕಣ್ಣನ್ ಪಾಟಾಳಿ ಕಥಕಳಿ ಟ್ರಸ್ಟ್ನ ಗೌರವಾಧ್ಯಕ್ಷ ಹಾಗೂ ಕಣ್ಣೂರು ವಿ.ವಿಯ ಬಹುಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಎ.ಎಂ ಶ್ರೀಧರನ್ ತುಳುವಿನ ಶತಮಾನದ ಕತೆಗಳನ್ನಾಯ್ದು ಮಲಯಾಳಂ ಗೆ ಅನುವಾದಿಸಿದ್ದಾರೆ. ಈ ಮೂಲಕ ತುಳುನಾಡ ಜೀವನ ಸಂಸ್ಕೃತಿಯ ಪರಿಚಯ ಮಲಯಾಳ ಸಾಹಿತ್ಯಕ್ಕಾಗಿದೆ.
ಈ ಕಾಯಕ ಕಾಸರಗೋಡು ಜಿಲ್ಲೆಯಿಂದಲೇ ನಡೆದ ಹಿನ್ನೆಲೆ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು.
ಶತಮಾನದ ತುಳು ಸಂಸ್ಕೃತಿಯ ಸಾಹಿತ್ಯವನ್ನು ಕೇರಳಕ್ಕೆ ಪರಿಚಯಿಸಿದ ಸಾಧಕನಿಗೆ ಗಡಿನಾಡಲ್ಲಿ ಗೌರವ, ಅಭಿನಂದನೆ
ಪ್ರಾಚೀನ ತುಳು ಭಾಷೆಯೇ ಮಲಯಾಳದ ಮೂಲ: ಡಾ. ಎ.ಎಂ. ಶ್ರೀಧರನ್
66
ಕಣಿಪುರ ಸುದ್ದಿಜಾಲ
previous post